ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ – ಎಣ್ಣೆಮಜಲು ಸ.ಕಿ.ಪ್ರಾ. ಶಾಲೆಗೆ ತೃತೀಯ ಸಮಗ್ರ

0

ಸುಬ್ರಹ್ಮಣ್ಯ ಸ.ಉ.ಹಿ.ಪ್ರಾ. ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯ ಕಿರಿಯರ ವಿಭಾಗದಲ್ಲಿ ಬಳ್ಪ ಗ್ರಾಮದ ಎಣ್ಣೆಮಜಲು ಸ.ಕಿ.ಪ್ರಾ. ಶಾಲೆಗೆ ತೃತೀಯ ಸಮಗ್ರ ಪ್ರಶಸ್ತಿ ಲಭಿಸಿದೆ. ಸಂಸ್ಕೃತ ಧಾರ್ಮಿಕ ಪಠಣದಲ್ಲಿ ನಮ್ರತಾ ಎ.ಆರ್ ಪ್ರಥಮ, ಮಾನ್ವಿ ಎ.ಸಿ ಅಭಿನಯ ಗೀತೆಯಲ್ಲಿ ಪ್ರಥಮ, ಚಿತ್ರಕಲೆಯಲ್ಲಿ ತೃತೀಯ, ಲಹರಿ ಎ.ಆರ್ ಅಶುಭಾಷಣದಲ್ಲಿ ಪ್ರಥಮ ಮತ್ತು ಇಂಗ್ಲಿಷ್ ಕಂಠಪಾಠದಲ್ಲಿ ದ್ವಿತೀಯ ಹಾಗೂ ದೇಶಭಕ್ತಿಗೀತೆಯಲ್ಲಿ ಸ್ಕಂದನ್ ತೃತೀಯ ಸ್ಥಾನ ಪಡೆದಿರುತ್ತಾರೆ.