ಸುಳ್ಯ ನಗರದ ಮಹಾಯೋಜನೆಯನ್ನು ಪರಿಶೀಲಿಸಿ, ಸರಳೀಕರಣಗೊಳಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಸುಪ್ರಿತ್ ಮೋಂಟಡ್ಕ ಮನವಿ ಮಾಡಿಕೊಂಡಿದ್ದಾರೆ.
ಸುಳ್ಯ ಕಸಬಾ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಮಹಾ ಯೋಜನೆಯಿಂದ ಸಾರ್ವಜನಿಕರಿಗೆ ತೊಂದರೆ ಯಾಗಿದ್ದು ಜಮೀನಿನ ವಿಸ್ತೀರ್ಣಕ್ಕೆ ಕೃಷಿಯೇತರ ಉದ್ದೇಶ ಭೂ ಪರಿವರ್ತನೆಗೊಂಡು ಜಮೀನನ್ನು ನಮೂನೆ -3 ಒದಗಿಸಿ ಆದರೆ ಸರಕಾರದ ಯೋಜನ ಪ್ರಾಧಿಕಾರವು ಯೋಜನಾ ಕಾಯ್ದೆ, 1961 ರನ್ವಯ ಯೋಜನಾ ಪ್ರದೇಶಕ್ಕೆ ಮಹಾ ಯೋಜನೆಯನ್ನು ಆದೇಶ ಮಾಡಿರುವುದು ತೊಂದರೆಯಾಗಿರುತ್ತದೆ. ಅಲ್ಲದೇ ಹಣಕಾಸಿನ ವ್ಯವಹಾರಕ್ಕೆ ಬ್ಯಾಂಕೇತರ ಚಟುವಟಿಕೆಗಳಿಗೆ ವ್ಯವಹಾರ ನಡೆಸಲು ಅಲ್ಲದೇ ಹೊಸದಾಗಿ ಮನೆ ನಿರ್ಮಾಣದ ಕಟ್ಟಡ ಕಟ್ಟಲು, ನಿವೇಶನ ಮಾರಾಟ, ಖರೀದಿ ಮಾಡಲು ಅನುಮತಿ ಕೊಡದೆ ಇದ್ದು, ತೀವ್ರ ಸಮಸ್ಯೆ ಉಂಟಾಗುವ ಪರಿಸ್ಥಿತಿ ನಿರ್ಮಾಣ ಆಗುವಂತಾಗಿದೆ. ಬಡ ಜನರು ಕೂಡ ಅಲೆದಾಡುವ ಪರಿಸ್ಥಿತಿ ಉಂಟಾಗಿರುತ್ತದೆ. ಅದುದರಿಂದ ಈ ಯೋಜನೆಯನ್ನು ಜಾರಿಗೊಳಿಸಿರುವುದರಿಂದ ಸಾರ್ವಜನಿಕರುಗೆ ತೊಂದರೆ ಉಂಟಾಗಿದೆ. ತಕ್ಷಣ ಯೋಜನೆಯ ಬಗ್ಗೆ ಮರು ಪರಿಶೀಲಿಸಿ ಸಡಿಲಗೊಳಿಸಲು ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಯವರಿಗೆ ಸುಪ್ರೀತ್ ಮೋoಟಡ್ಕ ಭೇಟಿ ಮಾಡಿ ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಯವರು ಇದರ ಬಗ್ಗೆ ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು