ಐದು ಯಶಸ್ವಿ ಕಾರ್ಯಕ್ರಮಕ್ಕೆ ತೆರೆ
ಸುಳ್ಯ ಅನ್ಸಾರಿಯಾ ಎಜುಕೇಷನ್ ಸೆಂಟರ್ ಅಧೀನದ ಅನ್ಸಾರಿಯಾ ದಅವಾ ಕಾಲೇಜಿನ ವಿದ್ಯಾರ್ಥಿ ಸಂಘಟನೆ ಅನ್ಸಾರುಸ್ಸುನ್ನ ಸ್ಟೂಡೆಂಟ್ಸ್ ಅಸೋಸಿಯೇಷನ್ ಇದರ 5ನೇ ವಾರ್ಷಿಕೋತ್ಸವ ಬಹಳ ಯಶಸ್ವಿಯಾಗಿ ಸಮಾಪ್ತಿಗೊಂಡಿತು.
ಕಳೆದ ಒಂದು ವರ್ಷದಲ್ಲಿ ವಿಧ್ಯಾರ್ಥಿ ಸಂಘಟನೆಯು 5 ವಿನೂತನ ಯೋಜನೆಯನ್ನು ಘೋಷಿಸಿ ಅದರಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿದೆ. 2019 ರಲ್ಲಿ ಆರಂಭಗೊಂಡ ಅನ್ಸಾರಿಯಾ ದಅವಾ ಕಾಲೇಜು ಇಂದು ಹಲವಾರು ವಿದ್ಯಾರ್ಥಿಗಳಿಗೆ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣವನ್ನು ಒಂದೇ ಕ್ಯಾಂಪಸ್ ನಲ್ಲಿ ನೀಡುತ್ತಿದೆ. ಉತ್ತಮ ಫಲಿತಾಂಶ ದೊಂದಿಗೆ ಇಲ್ಲಿನ ವಿಧ್ಯಾರ್ಥಿಗಳು ಸಮಾಜದ ಹಲವಾರು ವೇದಿಕೆಗಳಲ್ಲಿ ಪ್ರತಿಭೆಗಳಾಗಿ ಹೊರಹೊಮ್ಮುತ್ತಿದ್ದಾರೆ.
ದಅವಾ ಕಾಲೇಜಿನ ವಿದ್ಯಾರ್ಥಿ ಸಂಘಟನೆ ಅನ್ಸಾರುಸ್ಸುನ್ನ ಸ್ಟೂಡೆಂಟ್ಸ್ ಅಸೋಸಿಯೇಷನ್ ಇಂದು ಯಶಸ್ವಿ 5 ವರ್ಷಗಳನ್ನು ಪೂರೈಸಿದೆ. ಇದರ 5ನೇ ವಾರ್ಷಿಕದ ಭಾಗವಾಗಿ Fivedea ಎಂಬ ಹೆಸರಿನಲ್ಲಿ ಮುತಅಲ್ಲಿಮ್ ಕಾನ್ಫರೆನ್ಸ್,ರಾಜ್ಯ ಮಟ್ಟದ ಮುಹ್ಯುದ್ದೀನ್ ಮಾಲ ಆಲಾಪನೆ ಸ್ಪರ್ಧೆ, ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ಕಾರ್ಯಗಾರ, ರಂಝಾನ್ ತಿಂಗಳ ವಿಶೇಷ ಮಹಿಳಾ ತರಗತಿ ಮತ್ತು ಹಿಜಾಮ ಕ್ಯಾಂಪ್ ನಂತಹ 5 ಉತ್ತಮ ಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿದೆ.
ಸಮಾರೋಪ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವು ಸಂಸ್ಥೆಯ ಅಧ್ಯಕ್ಷರಾದ ಕೆ ಎಂ ಅಬ್ದುಲ್ ಮಜೀದ್ ಹಾಜಿ ಜನತಾರವರ ಅಧ್ಯಕ್ಷತೆಯಲ್ಲಿ ನಡೆಯಿತು. ದಅವಾ ಕಾಲೇಜಿನ ಪ್ರಾಂಶುಪಾಲರಾದ ಅಬೂಬಕ್ಕರ್ ಹಿಮಮಿ ಸಖಾಫಿ ಉದ್ಘಾಟಿಸಿದರು.
ಅನ್ಸಾರುಸ್ಸುನ್ನ ಗೌರವಾಧ್ಯಕ್ಷ ಅಡ್ವಕೇಟ್ ಅಬ್ದುಲ್ಲಾ ಹಿಮಮಿ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅತಿಥಿ ಗಳನ್ನು ದಅವಾ ವಿಧ್ಯಾರ್ಥಿ ಮುಹಮ್ಮದ್ ಇಲ್ಯಾಸ್ ಸ್ವಾಗತಿಸಿದರು.ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮುಹಿಮ್ಮಾತ್ ಸಂಸ್ಥೆಯ ಕಾರ್ಯದರ್ಶಿ ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್ ವಿದ್ಯಾರ್ಥಿ ಜೀವನದಲ್ಲಿ ಸಂಘಟನೆಯ ಮಹತ್ವಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಬ್ದುಲ್ಲ ಹಾಜಿ ಕಟ್ಟೆಕ್ಕಾರ್ಸ್,ಅನ್ಸಾರಿಯಾ ಪ್ರ.ಕಾರ್ಯದರ್ಶಿ ಅಬ್ದುಲ್ ಲತೀಫ್ ಹರ್ಲಡ್ಕ,ಕೋಶಾಧಿಕಾರಿ ಆದಂ ಹಾಜಿ ಕಮ್ಮಾಡಿ ,ಉಪಾಧ್ಯಕ್ಷ ಎಸ್ ಪಿ ಅಬೂಬಕ್ಕರ್, ಗಾಂಧಿನಗರ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷರಾದ ಮುಹಮ್ಮದ್ ಕೆ ಎಂ ಎಸ್, ಕಾರ್ಯದರ್ಶಿ ಕೆ ಬಿ ಅಬ್ದುಲ್ ಮಜೀದ್, ಸಂಸ್ಥೆಯ ಕಾರ್ಯದರ್ಶಿಗಳಾದ ಶರೀಫ್ ಜಟ್ಟಿಪ್ಪಳ್ಳ , ಕಮಾಲ್ ಅಜ್ಜಾವರ, ಉಸ್ತುವಾರಿಗಳಾದ ಹಮೀದ್ ಬೀಜಕೊಚ್ಚಿ ,ಕೆ. ಹಸನ್ ಹಾಜಿ, ಸಿದ್ದೀಕ್ ಕಟ್ಟೆಕ್ಕಾರ್ಸ್, ಗಲ್ಫ್ ಪ್ರತಿನಿಧಿ ಎಸ್ ಎಂ ಅಬ್ದುಲ್ ಹಮೀದ್ ಹಾಜಿ ನಿರ್ದೇಶಕರುಗಳಾದ ಜನತಾ ಹಮೀದ್ ಹಾಜಿ,ಶಾಫಿ ಕುತ್ತಮೊಟ್ಟೆ , ಸಿದ್ದೀಕ್ ಕೊಕ್ಕೋ, ಉಮ್ಮರ್ ಕೋಲ್ಚಾರ್, ಅಬ್ದುಲ್ ಗಫಾರ್ ಹಾಜಿ,ಸಲಹಾ ಸಮಿತಿ ಸದಸ್ಯರಾದ ಇಕ್ಬಾಲ್ ಎಲಿಮಲೆ, ಸಹಕಾರಿಗಳಾದ ಬಿ ಎಂ ಅಬೂಬಕ್ಕರ್ ಹಾಜಿ, ಕೆ ಎಚ್ ಅಬ್ದುಲ್ ಶುಕೂರ್ ಹಾಜಿ , ಮುಸ್ತಫಾ ಹಾಜಿ ಸಾಗರ್, ಡಿ ಎಚ್ ಅಬ್ದುಲ್ಲ , ಅಬ್ದುಲ್ಲ ಅಡ್ಕತಬೈಲ್, ಕೆ ಎಚ್ ಅಬ್ದುಲ್ ರಝಾಕ್ ,ಫೈಝಲ್ ಕಟ್ಟೆಕ್ಕಾರ್ಸ್ ಮತ್ತು ಸಂಸ್ಥೆಯ ಅಧ್ಯಾಪಕರುಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಅನ್ಸಾರಿಯಾಕ್ಕೆ ಧ್ವನಿವರ್ಧಕ ಕೊಡುಗೆ ಇದರ ಹಸ್ತಾಂತರ :-
ಅನ್ಸಾರಿಯಾ ದಹವಾ ವಿದ್ಯಾರ್ಥಿಗಳ ವತಿಯಿಂದ ಅನ್ಸಾರಿಯಾ ಧ್ವನಿವರ್ಧಕ ವನ್ನು ಕೊಡುಗೆಯಾಗಿ ನೀಡಿದರು. ಸಯ್ಯದ್ ಮುನೀರ್ ಅಹದಲ್ ತಂಙಳ್ ಹಸ್ತಾಂತರಿಸಿದರು.