ಸುಳ್ಯ ಪೊಲೀಸ್ ಠಾಣೆಯಲ್ಲಿ ಆ.23 ರಂದು SC/ST ಕುಂದುಕೊರತೆ ಸಭೆ ನಡೆಯಿತು.
ಸುಳ್ಯ ಠಾಣಾ ಉಪ ನಿರೀಕ್ಷಕರಾದ ಈರಯ್ಯ ದೂಂತೂರು ರವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ‘ಪ್ರತಿಯೊಬ್ಬರು ಕಾನೂನನ್ನು ಗೌರವಿಸ ಬೇಕು.ಸಮಾಜದಲ್ಲಿ ಪರಸ್ಪರ ಸೌಹಾರ್ದ ಜೀವನ ರೂಪಿಸುವುದರಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಕಾರಣವಾಗುತ್ತದೆ.
ತಮ್ಮ ತಮ್ಮ ಪರಿಸರದಲ್ಲಿ ಯಾವುದೇ ಕಾನೂನು ಭಾಹಿರ ಚಟುವಟಿಕೆ ಕಂಡು ಬಂದಲ್ಲಿ ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕರು ಕಾನೂನನ್ನು ಕೈಗೆತ್ತಿಕೊಳ್ಳುವ ಕೆಲಸ ಮಾಡಬಾರದು.
ಅಲ್ಲದೆ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಸದಾ ಜಾಗರೂಕರಾಗಿರಬೇಕು.
ಅವರ ಮೇಲೆ ಯಾವುದೇ ದೌರ್ಜನ್ಯಗಳು ನಡೆದರೆ ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಬೇಕು ಎಂದು ಅರಿವು ನೀಡಿದರು. ಸಮಸ್ಯೆಗಳು ಬರುವ ಮತ್ತು ಬಗ್ಗೆ ಮತ್ತು ನಿವಾರಣೆಯ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ದಲಿತ ಮುಖಂಡರುಗಳಾದ ನಂದರಾಜ್ ಸಂಕೇಶ, ಕರುಣಾಕರ ಪಲ್ಲತಡ್ಕ, ಶಂಕರ್ ಪೆರಾಜೆ, ಸಂಜೀವ ಪೈಚಾರು, ಸರಸ್ವತಿ ಬೊಳಿಯಮಜಲು,ಸೀತಾಲಕ್ಷ್ಮಿ, ವಿಜಯ ಆಲಡ್ಕ ಸಂಪಾಜೆ, ಪುಟ್ಟಣ್ಣ ವಳಿಕಜೆ, ಮಹೇಶ್ ಬೆಳ್ಳಾಲ್ಕರ್, ನಾರಾಯಣ ಕಿಲಂಗೋಡಿ, ತೇಜಸ್ ಕಲ್ಲುಗುಂಡಿ, ಸತೀಶ್ ಬೂಡುಮಕ್ಕಿ, ಚಂದ್ರಶೇಖರ ಪಲ್ಲತಡ್ಕ, ಪ್ರಕಾಶ್ ಪಾತೆಟ್ಟಿ, ಬಾಲಕೃಷ್ಣ ದೊಡ್ಡೇರಿ, ಹರೀಶ ಎಂ ಎಸ್ ಉಪಸ್ಥಿತರಿದ್ದರು.
ಪೋಲಿಸ್ ಸಿಬ್ಬಂದಿಗಳಾದ ಪ್ರಕಾಶ್,ರಾಮಚಂದ್ರ, ಪದ್ಮಾವತಿ ಇವರುಗಳು ಸಹಕರಿಸಿದರು.