ಆಲೆಟ್ಟಿ ಕಸ್ತೂರಿ ಬಾ ಮಹಿಳಾ ಮಂಡಲದ ಪದಗ್ರಹಣ ಸಮಾರಂಭ

0

ಆಲೆಟ್ಟಿ ಕಸ್ತೂರಿ ಬಾ ಮಹಿಳಾ ಮಂಡಲದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಆ.20 ರಂದು ಆಲೆಟ್ಟಿ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.


ಶ್ರೀಮತಿ ಯಶೋಧ ಕುಡೆಕಲ್ಲು ಅಧ್ಯಕ್ಷತೆ ವಹಿಸಿದ್ದರು.


ನೂತನ ಅಧ್ಯಕ್ಷೆ ಜಲಜಾಕ್ಷಿ ರೈ ಆಲೆಟ್ಟಿ, ಉಪಾಧ್ಯಕ್ಷೆ ಶ್ರೀಮತಿ ಗೀತಾ ಸುಧಾಮ ಆಲೆಟ್ಟಿ, ಕಾರ್ಯದರ್ಶಿ ಸರೋಜಿನಿ ಬಾರ್ಪಣೆ, ಖಜಾಂಜಿ ಜಾನಕಿ ಮೈಂದೂರು, ಜತೆ ಕಾರ್ಯದರ್ಶಿ ಉಷಾ ಸುಂದರ ಆಲೆಟ್ಟಿ, ನಿರ್ದೇಶಕರಾಗಿ ಶ್ರೀಮತಿ ರೋಹಿಣಿ ಕುಡೆಕಲ್ಲು,ಶ್ರೀಮತಿ ಮೀನಾಕ್ಷಿ ಗಡಿಪಣೆ,ಶ್ರೀಮತಿ ಯಶೋಧ ಗುಂಡ್ಯ,ಶ್ರೀಮತಿ ಪೂರ್ಣಿಮಾ ಕುಂಚಡ್ಕ, ಶ್ರೀಮತಿ ಹೇಮಾವತಿ ಕುಡೆಕಲ್ಲು ರವರನ್ನು ಆಯ್ಕೆ ಮಾಡಲಾಯಿತು.
ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾ ಆಲೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಮಹಿಳಾ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಮಧುಮತಿ ಬೊಳ್ಳೂರು ಪದ ಪ್ರಧಾನ ನೆರವೇರಿಸಿದರು.

ಆರೋಗ್ಯ ಶಿಕ್ಷಣಾಧಿಕಾರಿ ಪ್ರಮೀಳಾ ಟಿ ಯವರು ಆರೋಗ್ಯದ ರಕ್ಷಣೆ ಕುರಿತು ಮಾಹಿತಿ ನೀಡಿದರು. ಆರೋಗ್ಯ ಇಲಾಖೆಯ ಸೌಮ್ಯ, ಪೂರ್ಣಿಮಾ, ಆಶಾ ಕಾರ್ಯಕರ್ತೆ ಉಷಾ ಕಿರಣ ರವರು ಆರೋಗ್ಯ ತಪಾಸಣೆ ನಡೆಸಿಕೊಟ್ಟರು.

ಯಶೋಧ ಗುಂಡ್ಯ ಪ್ರಾರ್ಥಿಸಿದರು. ರೋಹಿಣಿ ಕುಡೆಕಲ್ಲು ಸ್ವಾಗತಿಸಿ, ಜಾನಕಿ ಮೈಂದೂರು ವಂದಿಸಿದರು. ಶ್ರೀಮತಿ ಜಯಲಕ್ಷ್ಮಿಜನಾರ್ದನ ಕಾರ್ಯಕ್ರಮ ನಿರೂಪಿಸಿದರು.