ನಿಮ್ಮ ಇಂಟೀರಿಯರ್‌ನ ಆಯ್ಕೆ – ಇಂಪೀರಿಯಲ್ ಫರ್ನಿಚರ್!!

0

ಸುಳ್ಯ: ಯಾವುದೇ ಮನೆ, ಕಚೇರಿ ಅಥವಾ ಸಂಸ್ಥೆಗಳಿಗೆ ಒಂದು ‘ಲುಕ್’ ಬರುವುದೇ ಅಲ್ಲಿರುವ ಫರ್ನಿಚರ್, ಚಯರ್ ಹಾಗೂ ವಾರ್ಡ್‌ರೋಬ್‌ಗಳಿಂದ.

ಇದೀಗ, ಕಳೆದ ೩೬ ವರ್ಷಗಳಿಂದ ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿಯಲ್ಲಿ ಮನೆಮಾತಾಗಿರುವ ‘ಸೋಜಾ ಎಲೆಕ್ಟ್ರಾನಿಕ್ಸ್’ನವರ ಸಹ ಸಂಸ್ಥೆ ಇಂಪೀರಿಯಲ್ ಫರ್ನಿಚರ್, ಸುಳ್ಯದ ಶ್ರೀರಾಂ ಪೇಟೆಯಲ್ಲಿರುವ ಅಕ್ಷತ್ ಸೆಂಟ್ರಲ್ ಸ್ಕ್ವಾರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಪೀರಿಯಲ್ ಫರ್ನಿಚರ್ ಮಳಿಗೆಯಲ್ಲಿ ಈಗಾಗಲೇ, ಆ.೧೨ರಂದು ‘ವಾರ್ಷಿಕ ಮಾರಾಟ’ ಪ್ರಾರಂಭವಾಗಿದ್ದು ಈ ಮೇಳ ಸೆ.೧೨ರವರೆಗೆ ನಡೆಯಲಿದೆ. ಇದು ಸುಳ್ಯ ಮತ್ತು ಸುತ್ತಮುತ್ತಲಿನ ಗ್ರಾಹಕರಿಗೊಂದು ‘ಸುಪೀರಿಯರ್ ಸುಪ್ರೀಂ’ ಅವಕಾಶವಾಗಿದ್ದು, ನಿಮ್ಮಿಷ್ಟದ – ಮರ, ಸ್ಟೀಲ್ ಮತ್ತು ಪ್ಲಾಸ್ಟಿಕ್‌ಗಳ ವಿವಿಧ ವಿನ್ಯಾಸಗಳ ಫರ್ನಿಚರ್‌ಗಳು, ಕಾಟ್‌ಗಳು, ಚಯರ್‌ಗಳು, ಡೈನಿಂಗ್ ಸೆಟ್, ವಾರ್ಡ್‌ರೋಬ್‌ಗಳ ಸಹಿತ, ಮನೆಗಳಿಗೆ, ಆಫೀಸ್‌ಗಳಿಗೆ ಮತ್ತು ಶಾಲಾ-ಕಾಲೇಜುಗಳಿಗೆ ಅಗತ್ಯವಾಗಿರುವ ಪೀಠೋಪಕರಣಗಳನ್ನು ಈ ಆಫರ್ ನಲ್ಲಿ ಸುಲಭ ಕಂತುಗಳಲ್ಲಿ ನಿಮ್ಮದಾಗಿಸಿಕೊಳ್ಳಬಹುದಾಗಿದೆ.


ಇಷ್ಟು ಮಾತ್ರವಲ್ಲದೇ ಗ್ರಾಹಕರಿಗೆ ಲಕ್ಕಿ ಡ್ರಾ ಕೂಪನ್ ಗಳನ್ನೂ ಸಹ ನೀಡಿ, ಅದೃಷ್ಟಶಾಲಿಗಳು ಈ ಕೆಳಗಿನ ಉಡುಗೊರೆಗಳನ್ನು ತಮ್ಮದಾಗಿಸಿಕೊಳ್ಳುವ ಸದವಕಾಶವೂ ಇಲ್ಲಿದೆ:
ಪ್ರಥಮ ಬಹುಮಾನ – ಒಬ್ಬ ಅದೃಷ್ಟಶಾಲಿಗೆ ಮೊಬೈಲ್ ಫೋನ್ ; ದ್ವಿತೀಯ ಬಹುಮಾನ – ಇಬ್ಬರು ಅದೃಷ್ಟಶಾಲಿಗಳಿಗೆ ಟಿಲ್ಟಿಂಗ್ ಗ್ರೈಂಡರ್ ; ತೃತೀಯ ಬಹುಮಾನ – ಮೂವರು ಲಕ್ಕಿ ಚಾಂಪ್ ಗಳಿಗೆ ಮಿಕ್ಷರ್ ಗ್ರೈಂಡರ್ ; ಚತುರ್ಥ ಬಹುಮಾನ – ಐವರಿಗೆ ಇಸ್ತ್ರಿ ಪೆಟ್ಟಿಗೆ ಮನೆಗೊಯ್ಯುವ ಅವಕಾಶವಿದೆ.


ಇನ್ನು ಯಾವುದೇ ಕಡೆಗೆ ಶಾಪಿಂಗ್ ಹೋದಾಗ ನಮ್ಮನ್ನು ಕಾಡುವ ಮೊದಲ ಪ್ರಶ್ನೆ ಅಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇದೆಯೇ ಎಂಬುದು.. ಆದರೆ ಸುಳ್ಯದಲ್ಲಿರುವ ಇಂಪೀರಿಯಲ್ ಫರ್ನಿಚರ್ ಮಳಿಗೆಗೆ ಬರುವ ಗ್ರಾಹಕರು ಈ ವಿಚಾರದಲ್ಲಿ ಟೆನ್ಷನ್ ಮಾಡುವ ಅಗತ್ಯವೇ ಇಲ್ಲ! ಯಾಕೆಂದರೆ ಗ್ರಾಹಕರಿಗೆ ವಿಶಾಲವಾದ ಪಾರ್ಕಿಂಗ್ ಸೌಲಭ್ಯ ಇಲ್ಲಿ ಲಭ್ಯವಿದ್ದು, ಇನ್ನು ನಿಮ್ಮ ಇಚ್ಛೆಯ ವಸ್ತುಗಳನ್ನು ಸರಿಯಾಗಿ ನೋಡಿ, ಮನೆಯವರೊಂದಿಗೆ ಚರ್ಚಿಸಿ ಬಳಿಕ ಖರೀದಿಸಲು ಅನುಕೂಲವಾಗುವಂತೆ ಮೂರು ಮಹಡಿಗಳ ವಿಶಾಲವಾದ ಶೋರೂಂ ಇದಾಗಿದೆ.


ಒಟ್ಟಿನಲ್ಲಿ ಈ ಬಾರಿ ನಿಮ್ಮ ಮನಗೆ, ಆಫೀಸಿಗೆ ಅಥವಾ ಶಿಕ್ಷಣ ಸಂಸ್ಥೆಗಳಿಗೆ ಗುಣಮಟ್ಟದಿಂದ ಕೂಡಿದ ಪೀಠೋಪಕರಗಳ ಸಹಿತ ಇಂಟೀರಿಯರ್ ಐಟಂಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಲು ನೀವು ಬಯಸುತ್ತಿದ್ದಲ್ಲ್ಲಿ, ತಡಮಾಡದೇ ‘ಇಂಪೀರಿಯಲ್ ಫರ್ನಿಚರ್’ ಮಳಿಗೆಗೊಮ್ಮೆ ಭೇಟಿ ಕೊಟ್ಟು ಈ ‘ಆನಿವರ್ಸರಿ ಸೇಲ್’ನ ಪ್ರಯೋಜನಗಳನ್ನು ಪಡೆದುಕೊಳ್ಳಿ.