ಸಂಪಾಜೆ ಆರ್ ಎಂ ಎಸ್ ಎ ಸರಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ

0

ಸಂಪಾಜೆ ಆರ್ ಎಂ ಎಸ್ ಎ ಸರಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯನ್ನು ಆ.23 ರಂದು ಆಚರಿಸಲಾಯಿತು.

ಶಾಲೆಯ ವಿಜ್ಞಾನ ಶಿಕ್ಷಕಿ ಶ್ರೀಮತಿ ನಯನಕುಮಾರಿ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಚಂದ್ರಯಾನ ವಿಷಯದ ಮಾಹಿತಿ ಕುರಿತು ಶಾಲೆಯ ಒಂಭತ್ತ ನೇ ತರಗತಿಯ ವಿದ್ಯಾರ್ಥಿ ಯಶಸ್ ಡಿ. ಬಿ ಮಾತನಾಡಿದರು. ನಂತರ ಚಂದ್ರಯಾನದ ಮೂರು ಬಗೆಗಿನ ವಿಡಿಯೋ ತುಣುಕುಗಳನ್ನು ಪ್ರದರ್ಶಿಸಲಾಯಿತು.

ಮುಖ್ಯ ಗುರುಗಳು, ಅಧ್ಯಾಪಕರು ಮತ್ತು ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಹಾಜರಿದ್ದು ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು.

ಶಾಲಾ ವಿದ್ಯಾರ್ಥಿ ಅಬ್ದುಲ್ ರಹೀಮ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.