ಸುಬ್ರಹ್ಮಣ್ಯ ಕೆ.ಎಸ್.ಎಸ್ ಕಾಲೇಜಿನಲ್ಲಿ ಮಾಧ್ಯಮದವರೊಂದಿಗೆ ಸಂವಾದ ಕಾರ್ಯಕ್ರಮ

0

” ಮಾಧ್ಯಮ ಅನ್ನುವುದು ಸಮಾಜದ ಕೈಗನ್ನಡಿ ಇದ್ದಂತೆ. ಜನತೆಗೆ ಬೇಕಾದ ಮಹತ್ವದ ಜ್ಞಾನವನ್ನು ನೀಡುತ್ತದೆ.


ಸಾಮಾಜಿಕ ದೃಷ್ಟಿಕೋನ ಇರಿಸಿಕೊಂಡು ಜನತೆಯ ಹಿತಕ್ಕಾಗಿ ಪತ್ರಿಕೆಗಳು ಅನನ್ಯ ಕಾರ್ಯವನ್ನು ನಿರ್ವಹಿಸುತ್ತಾ ಬಂದಿದೆ. ಆಧುನಿಕ ಯುಗದಲ್ಲಿ ನಮಗೆ ದಾಖಲೆಗಳು ಅನಿವಾರ್ಯ . ಪತ್ರಿಕೆಗಳು ದಾಖಲೆಯಾಗಿ ಜನತೆಗೆ ಪೂರಕವಾಗಿ ಸಹಕಾರ ನೀಡುತ್ತದೆ ಎಂದು ಸುಳ್ಯ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾ ಕುಮಾರ್ ನಾಯರ್ ಕೆರೆ ಹೇಳಿದರು.

ಸುಬ್ರಹ್ಮಣ್ಯ ಕೆ.ಎಸ್.ಎಸ್ ಕಾಲೇಜಿನಲ್ಲಿ ಪ್ರೆಸ್ ಮೀಡಿಯಾ ಮತ್ತು ಪಬ್ಲಿಸಿಟಿ ಸೆಲ್ ವತಿಯಿಂದ ಇಂದು ಮಾಧ್ಯಮದವರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ. ದಿನೇಶ್ ಪಿ.ಟಿ. ವಹಿಸಿದ್ದರು.

ಪತ್ರಕರ್ತರಾದ ಬಾಲಕೃಷ್ಣ ಭೀಮಗುಳಿ, ಲೋಕೇಶ್ ಬಿ.ಎನ್, ರತ್ನಾಕರ ಸುಬ್ರಹ್ಮಣ್ಯ, ದಯಾನಂದ ಕಲ್ನಾರ್, ಶಿವರಾಮ ಕಜೆಮೂಲೆ, ಸಂತೋಷ್ ಕುಮಾರ್, ಶಿವ ಭಟ್ ಕಾಂಚನ, ಪ್ರಶಾಂತ್ ನೆಲ್ಯಾಡಿ, ಯತೀಶ್ ನೆಲ್ಯಾಡಿ, ಅನನ್ಯಾ ಕಾಟೂರು, ಗೋಪಿಚಂದನ್ ಕೆ.ಎಸ್ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು. ಉಪನ್ಯಾಸಕರುಗಳಾದ ಸುಮಿತ್ರಾ ಅರಂಪಾಡಿ ಸ್ವಾಗತಿಸಿದರು. ಪುಷ್ಪಾ ಡಿ. ವಂದಿಸಿದರು. ವಿದ್ಯಾರ್ಥಿನಿ ಕಲ್ಪನಾ ಕಾರ್ಯಕ್ರಮ ನಿರೂಪಿಸಿದರು.