ಬೆಂಗಳೂರಿನಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಮಟ್ಟದ ವಸ್ತು ಪ್ರದರ್ಶನಕ್ಕೆ ಆಯ್ಕೆ
ಅರಂತೋಡು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಳೆದ 2022ರಲ್ಲಿ ಆರಂಭವಾದ ಪ್ರಕೃತಿ ವನ ಧನ ವಿಕಾಸ ಕೇಂದ್ರದಲ್ಲಿ ಸುಳ್ಯ ತಾಲೂಕಿನ ವಿವಿಧ ಗ್ರಾಮಗಳಲ್ಲಿನ 300 ಜನ ಸಂಜೀವಿನಿ ಸಂಘದ ಸದಸ್ಯರಿದ್ದು, ಇದರಲ್ಲಿ 60 ಜನ ಮಹಿಳೆಯರು, ವಿವಿಧ ರೀತಿಯ ಕಾಡಿನಲ್ಲಿ ಸಿಗುವ ಕಚ್ಚಾವಸ್ತುಗಳನ್ನು ಬಳಸಿಕೊಂಡು ಸಾಂಪ್ರದಾಯಿಕ ಕಲೆ – ಉತ್ಪನ್ನಗಳಾದ (ಒಲಿಯ ಚಾಪೆ, ಬುಟ್ಟಿ, ತೆಂಗಿನ ಗೆರಟಿನ ಸೌಟು, ಮುಟ್ಟಾಳೆ, ಕಾಡು ಜೇನು ಇತ್ಯಾದಿ ಉತ್ಪನ್ನಗಳನ್ನು ತಯಾರಿಸಿದ್ದಾರೆ.
ಈ ಸಂಜೀವಿನಿ ಸಂಘದ ಮಹಿಳೆಯರು ತಯಾರಿಸುವ ಉತ್ಪನ್ನಗಳಲ್ಲಿ “ಪ್ರಕೃತಿ ಕಾಡು ಜೇನು” ಉತ್ಪನ್ನವು ಬೆಂಗಳೂರಿನಲ್ಲಿ ನಡೆಯುತ್ತಿರುವ ಮೂರು ದಿವಸದ ಅಂತರಾಷ್ಟ್ರೀಯ ಮಟ್ಟದ ವಸ್ತು ಪ್ರದರ್ಶನಕ್ಕೆ ಆಯ್ಕೆಯಾಗಿದೆ.
ಈ ಅಂತರಾಷ್ಟ್ರೀಯ ಮಟ್ಟದ ವಸ್ತು ಪ್ರದರ್ಶನ ಮೇಳಕ್ಕೆ ಪ್ರಕೃತಿ ವನ ಧನ ವಿಕಾಸ ಕೇಂದ್ರದ ಎರಡು ಮಂದಿ ಸದಸ್ಯರು ಉತ್ಪನ್ನಗಳೊಂದಿಗೆ ಹಾಜರಾಗಿರುವುದಾಗಿ ತಿಳಿದುಬಂದಿದೆ.