ಕಾರಿನ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ ಸಾಮಾಜಿಕ ಜಾಲತಾಣದ ಲ್ಲಿ ವೈರಲ್..
ಕೋಲ್ಚಾರು -ಬಂದಡ್ಕ ರಸ್ತೆಯ ಕನ್ನಡಿತ್ತೋಡು ಅರಣ್ಯ ಪ್ರದೇಶದಲ್ಲಿ
ಆ. 23 ರಂದು ಸಂಜೆ ಚಿರತೆಯೊಂದು ರಸ್ತೆ ದಾಟುತಿದ್ದ ದೃಶ್ಯ ಕಾರಿನ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಪಾಲಾರ್ ನಿವಾಸಿ ಬಂದಡ್ಕ ಶಾಲೆಯ ನಿವೃತ್ತ ಶಿಕ್ಷಕಬಜೆಸತ್ಯನಾರಾಯಣ ಪ್ರಕಾಶ್ ರವರು ತನ್ನ ಕಾರಿನಲ್ಲಿ ಹೋಗುತ್ತಿದ್ದಾಗ ಚಿರತೆ ರಸ್ತೆ ದಾಟುತ್ತಿರುವುದು ಕಂಡು ಬಂದಿದೆ. ಎಡ ಬದಿಯ ಅರಣ್ಯ ಪ್ರದೇಶದಿಂದ ಚಿರತೆ ಜಿಗಿದು ಬಲಭಾಗಕ್ಕೆ ದಾಟಿರುವುದು ವೀಡಿಯೋದಲ್ಲಿ ಗಮನಿಸಬಹುದಾಗಿದೆ.
ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಅತ್ಯಂತ ಎಚ್ಚರ ವಹಿಸಬೇಕಾಗಿದೆ.