ಕೇರ್ಪಳದ ಪಯಸ್ವಿನಿ ಯುವಕ ಮಂಡಲ ನೇತೃತ್ವದಲ್ಲಿ, ಪಯಸ್ವಿನಿ ಹಿರಿಯ ವಿದ್ಯಾರ್ಥಿ ವೃಂದ ಹಾಗೂ ಕೇರ್ಪಳ, ಕುರುಂಜಿ, ಭಸ್ಮಡ್ಕ, ಕುರುಂಜಿಭಾಗ್, ಬೂಡು ಊರವರ ಸಹಭಾಗಿತ್ವದಲ್ಲಿ 33 ನೇ ವರ್ಷದ ಪಯಸ್ವಿನಿ ಕ್ರೀಡೋತ್ಸವ ಆ.25ರಂದು ಪಯಸ್ವಿನಿ ವಠಾರದಲ್ಲಿ ನಡೆಯಿತು.
ಹಿರಿಯರಾದ ಶ್ರೀಮತಿ ಸುಶೀಲ ಚಂದ್ರೋಜಿ ರಾವ್ ಉದ್ಘಾಟನೆ ನೆರವೇರಿಸಿದರು. ಕೆವಿಜಿಪಿ ನಿವೃತ್ತ ಉಪನ್ಯಾಸ ಮೇದಪ್ಪ ಗೌಡ ನೆಕ್ರಾಜೆ, ನಿವೃತ್ತ ಅರಣ್ಯ ಇಲಾಖಾ ಅಧೀಕ್ಷಕ ಪುರುಷೋತ್ತಮ ನಾಯ್ಕ್, ಎನ್ನೆಂಸಿ ನಿವೃತ್ತ ಉದ್ಯೋಗಿ ಕರುಣೇಶ್ ಕುರುಂಜಿಗುಡ್ಡೆ, ಬೂಡು ಅಂಗನವಾಡಿ ಕಾರ್ಯಕರ್ತೆ ಕು.ಕವಿತಾ ಟೀಚರ್, ಹಿರಿಯರಾದ ಹೊನ್ನಪ್ಪ ಗೌಡ ಕೇರ್ಪಳ, ಭಗವತೀ ಯುವ ಸೇವಾ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ಕೇರ್ಪಳ, ಸತೀಶ್ ಕೇರ್ಪಳ ಮುಖ್ಯ ಅತಿಥಿಗಳಾಗಿದ್ದರು.
ಕೇರ್ಪಳ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಶ್ರೀಮತಿ ಉಷಾ ಚಂದ್ರಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಕೇರ್ಪಳ ಶಾಲಾ ಹಿರಿಯ ವಿದ್ಯಾರ್ಥಿ ಗಣೇಶ್ ದುಬೈ ಸ್ಥಾಪಿಸಿದ ದತ್ತಿ ನಿಧನ ಯನ್ನು ವಿತರಿಸಲಾಯಿತು. ಕೇರ್ಪಳ ಶಾಲಾ ಶಿಕ್ಷಕಿ ಹೊನ್ನಮ್ಮ ಟೀಚರ್ ಕಾರ್ಯಕ್ರಮ ನಿರ್ವಹಿಸಿದರು.
ಯುವಕ ಮಂಡಲದ ಅಧ್ಯಕ್ಷ ಭರತ್ ಕುರುಂಜಿ, ಕಾರ್ಯದರ್ಶಿ ಹೇಮಪ್ರಕಾಶ್ ಕುಂತಿನಡ್ಕ, ಕೋಶಾಧಿಕಾರಿ ಸುಶಾಂತ್ ಕೇರ್ಪಳ ವೇದಿಕೆಯಲ್ಕಿ ಇದ್ದರು.
ಮುದ್ದು ಮಕ್ಕಳಿಗೆ ಕೃಷ್ಣ ವೇಷ ಸಹಿತ, ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ ವಿವಿಧ ಸ್ಪರ್ಧೆ ಆಯೋಜನೆಗೊಂಡಿತು.
ಶ್ರೀಮತಿ ವಿನುತಾ ಭರತ್ ಪ್ರಾರ್ಥಿಸಿದರು.
ಯುವಕ ಮಂಡಲದ ಪೂರ್ವಾಧ್ಯಕ್ಷ ಲಕ್ಷ್ಮೀಶ್ ದೇವರಕಳಿಯ ಸ್ವಾಗತಿಸಿದರು. ಚಂದ್ರಶೇಖರ ರಾವ್ ಕೇರ್ಪಳ ವಂದಿಸಿದರು.
ವಿನಯ ಕೇರ್ಪಳ, ವಿನ್ಯಾಸ್ ಕುರುಂಜಿ, ಕು. ಅನನ್ಯ ಕೇರ್ಪಳ ಕಾರ್ಯಕ್ರಮ ನಿರೂಪಿಸಿದರು.