ಬೆಳ್ಳಾರೆಯಲ್ಲಿ ಸುಳ್ಯ ಕುಲಾಲ ಸುಧಾರಕ ಸೇವಾ ಸಂಘದ ವಾರ್ಷಿಕ ಮಹಾಸಭೆ – ಸನ್ಮಾನ

0

ಕುಲಾಲ ಸುಧಾರಕ ಸೇವಾ ಸಂಘ ಸುಳ್ಯ ಬೆಳ್ಳಾರೆ ಇದರ 2023-24 ನೇ ಸಾಲಿನ ವಾರ್ಷಿಕ ಮಹಾಸಭೆಯು ಆ.25 ರಂದು ಬೆಳ್ಳಾರೆ ದೇವಿ ಹೈಟ್ಸ್ ನ ಸಭಾಂಗಣದಲ್ಲಿ ನಡೆಯಿತು.


ಕುಲಾಲ ಸೇವಾ ಸಂಘದ ಅಧ್ಯಕ್ಷ ನಾಗೇಶ್ ಕುಲಾಲ್ ಮಹಾಸಭೆಯ ವಹಿಸಿದ್ದರು.
ಸಂಘದ ಕಾರ್ಯದರ್ಶಿ ಧನಂಜಯ ಕುಲಾಲ್ ವಾರ್ಷಿಕ ವರದಿ ಮಂಡಿಸಿದರು.
ಖಜಾಂಜಿ ದಿನೇಶ್ ಕುಲಾಲ್ ಲೆಕ್ಕಪತ್ರ ಮಂಡಿಸಿದರು.
ವಾರ್ಷಿಕ ಯೋಜನೆಯ ಆಯವ್ಯಯ ಪಟ್ಟಿಯನ್ನು ವಿಶ್ವನಾಥ ಪೆಲತ್ತಮೂಲೆ ವಾಚಿಸಿದರು.


ವಿದ್ಯಾರ್ಥಿಗಳಿಗೆ ಸನ್ಮಾನ


ಎಸ್.ಎಸ್.ಎಲ್.ಸಿ.,ಪಿಯುಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ 12 ಮಂದಿ ವಿದ್ಯಾರ್ಥಿಗಳನ್ನು ಶಾಲು ಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.


ಸ್ವಂತ ಕಟ್ಟಡ ನಿರ್ಮಾಣಕ್ಕೆ ಜಾಗ ಖರೀದಿಗೆ ಮನವಿ ಪತ್ರ ಬಿಡುಗಡೆ

ಕುಲಾಲ ಸುಧಾರಕ ಸೇವಾ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಉದ್ದೇಶಿಸಿದ್ದು ನೆಟ್ಟಾರಿನಲ್ಲಿ 35 ಸೆಂಟ್ಸ್ ಜಾಗ ಖರೀದಿ ಮಾಡಲು ಮುಂದಾಗಿದ್ದು ಜಾಗ ಖರೀದಿಗೆ ಧನ ಸಹಾಯ ನೀಡುವ ಬಗ್ಗೆ ಕಟ್ಟಡ ಸಮಿತಿ ವತಿಯಿಂದ ಮನವಿ ಪತ್ರ ಬಿಡುಗಡೆ ಮಾಡಲಾಯಿತು.ಈ ಸಂದರ್ಭದಲ್ಲಿ ಕಟ್ಟಡ ಸಮಿತಿ ಅಧ್ಯಕ್ಷ ನಾಗಪ್ಪ ಕುಲಾಲ್ ,ಕಾರ್ಯದರ್ಶಿ ನಾಗೇಶ್ ಕುಲಾಲ್ ತಡಗಜೆ,ಕೋಶಾಧಿಕಾರಿ ಚಂದ್ರಶೇಖರ ಕುಲಾಲ್ ಬಸ್ತಿಗುಡ್ಡೆ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಿರಣ್ ಅಟ್ಲೂರು ಮನವಿಯ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಅತಿಥಿಗಳಾಗಿ ಮಂಗಳೂರಿನ ನ್ಯಾಯವಾದಿ ಹಾಗೂ ಕುಲಶೇಖರ ಧರ್ಮಶಾಸ್ತ ಮಂದಿರ ಟ್ರಸ್ಟ್ ಅಧ್ಯಕ್ಷ ರಾಮ್ ಪ್ರಸಾದ್ ಎಸ್,ಮಂಗಳೂರು ಸಂಧ್ಯಾ ಕಾಲೇಜು ಉಪನ್ಯಾಸಕಿ ಶ್ರೀಮತಿ ಆಶಾಲತಾ, ಕುಲಾಲ ಸಂಘದ ಉಪಾಧ್ಯಕ್ಷೆ ಸುಮಿತ್ರ ಮಣಿಮಜಲು,ನಿಕಟಪೂರ್ವಾಧ್ಯಕ್ಷ ಶೈಲೇಶ್ ನೆಟ್ಟಾರು ನಿರ್ದೇಶಕರಾದ ಹರೀಶ್ ಅರಂಬೂರು,ಲಕ್ಷ್ಮಣ ಮುಂಡುಗಾರು,ಮಧುಕರ ಐವರ್ನಾಡು,ಸುಕುಮಾರ ಸುಬ್ರಹ್ಮಣ್ಯ,ಲಲಿತ ನಾಗಪ್ಪ ಕುಲಾಲ್ ಪನ್ನೆ,ಗಣೇಶ್ ಕುಲಾಲ್ ತಡಗಜೆ ದಳಪತಿ ಉಪಸ್ಥಿತರಿದ್ದರು.


ಕೊರಗಪ್ಪ ಕುಲಾಲ್ ಸನ್ಮಾನಿತರ ಪಟ್ಟಿ ವಾಚಿಸಿದರು,ನಮಿತಾ ಪಂಜಿಗಾರು,ಕೇಶವ ಕುಲಾಲ್ ಅತಿಥಿಗಳನ್ನು ಪರಿಚಯಿಸಿದರು.
ಸಂಘದ ಅಧ್ಯಕ್ಷ ನಾಗೇಶ್ ಕುಲಾಲ್ ಸ್ವಾಗತಿಸಿ, ಕು.ನಿತ್ಯಶ್ರೀ, ಕು.ಕೀರ್ತನ ಪ್ರಾರ್ಥಿಸಿದರು.