ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾ ನಿಲಯದ 2024-25 ಅವಧಿಯಲ್ಲಿ ಇವರು ನಡೆಸಿದ ಭರತನಾಟ್ಯ ವಿಭಾಗದ ವಿದ್ವತ್ ಪೂರ್ವ ಪರೀಕ್ಷೆಯಲ್ಲಿ ಮಾ.ತನ್ಮಯ್ ಕಿನ್ನಿಕುಮ್ರಿ ಇವರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ .
ಇವರು ಖ್ಯಾತ ಭರತನಾಟ್ಯ ಕಲಾ ಗುರು ವಿದ್ವಾನ್.ದಿ. ಕುದ್ಕಾಡಿ ವಿಶ್ವನಾಥ ರೈ ಸ್ಥಾಪಿತ ಸಂಸ್ಥೆ, ವಿಶ್ವಕಲಾನೀಕೇತನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಆಂಡ್ ಕಲ್ಚರ್ , ಪುತ್ತೂರು ಇದರ ಗುರು ಕನಾ೯ಟಕ ಕಲಾಶ್ರೀ ವಿದುಷಿ ನಯನ ವಿ. ರೈ ಮತ್ತು ವಿದುಷಿ ಸ್ವಸ್ತಿಕ ಆರ್ ಶೆಟ್ಟಿ ಇವರ ಶಿಷ್ಯ, ಪ್ರಸ್ತುತ ತನ್ಮಯ್ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ ಎಸ್ಸಿ., ಸೂಕ್ಷ್ಮಾಣು ಜೀವ ವಿಜ್ಞಾನ ವಿಭಾಗದಲ್ಲಿ ಪದವಿಯ ಅಧ್ಯಯನವನ್ನು ಮಾಡುತ್ತಿದ್ದಾರೆ. ಇವರು ಸುಳ್ಯ ತಾಲೂಕಿನ ಕಿನ್ನಿಕುಮ್ರಿ ಶ್ರೀಮತಿ ಗೀತಾ ಮತ್ತು ಕುಮಾರಸ್ವಾಮಿ ಕೆ.ಎಸ್ ಇವರ ಪುತ್ರ.
Home Uncategorized ಪಂಜ: ಭರತನಾಟ್ಯ ವಿಭಾಗದ ವಿದ್ವತ್ ಪೂರ್ವ ಪರೀಕ್ಷೆಯಲ್ಲಿ ಮಾ.ತನ್ಮಯ್ ಕಿನ್ನಿಕುಮ್ರಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ