ಸುಳ್ಯದಲ್ಲಿ ಲಯನ್ಸ್ ಜಿಲ್ಲೆ 318 ರ ಬ್ಯಾಡ್ಮಿಂಟನ್ ಟೂರ್ನಮೆಂಟ್

0

ದಿನಾಂಕ 12-1-25ರ ಆದಿತ್ಯವಾರ ಲಯನ್ಸ್ ಕ್ಲಬ್ ಸುಳ್ಯ ಇದರ ಆಶ್ರಯದಲ್ಲಿ ಲಯನ್ಸ್ ಜಿಲ್ಲಾ ಬ್ಯಾಡ್ಮಿಂಟನ್ ಟೂರ್ನಮೆಂಟ್ ಜ.12 ರಂದು ಸುಳ್ಯ ಕುರುಂಜಿಗುಡ್ಡೆಯಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ಜರಗಿತು.


ಲಯನ್ಸ್ ಜಿಲ್ಲಾ ರಾಜ್ಯಪಾಲರಾದ ಲ.ಪಿಎಂಜೆಎಫ್ ಬಿ.ಎಂ.ಭಾರತಿ ದೀಪ ಬೆಳಗಿಸಿ ಕ್ರೀಡಾಕೂಟವನ್ನು ಉದ್ಘಾಟಿಸಿದರು, ಪ್ರದಾನಕಾರ್ಯದರ್ಶಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಶುಭಹಾರೈಸಿದರು, ಜಿಲ್ಲಾ ಬ್ಯಾಡ್ಮಿಂಟನ್ ಸಂಯೋಜಕ ಡಾ. ಲಕ್ಷ್ಮೀಶ್ ಕೆ.ಯಸ್., ಸುಳ್ಯ ಲಯನ್ಸ್ ಅಧ್ಯಕ್ಷ ಲ.ರಾಮಕೃಷ್ಣ ರೈ, ಸಂಘಟನಾ ಸಮಿತಿ ಅಧ್ಯಕ್ಷ ಲ.ವೀರಪ್ಪ ಗೌಡ ಕಣ್ಕಲ್, ಕಾರ್ಯದರ್ಶಿ ಲ. ರಾಮಚಂದ್ರ ಪಳ್ಳತಡ್ಕ, ಖಜಾಂಚಿ ಲ. ರಮೇಶ್ ಶೆಟ್ಟಿ, ಸಂಘಟನಾ ಸಮಿತಿ ಕಾರ್ಯದರ್ಶಿ ಲ.ಕಿರಣ್ ನೀರ್ಪಾಡಿ, ಖಜಾಂಚಿ ಲ.ದೊಡ್ಡಣ್ಣ ಬರೆಮೇಲು, ಲ. ದೀಪಕ್ ಕುತ್ತಮೊಟ್ಟೆ ಉಪಸ್ಥಿತರಿದ್ದರು,
ಲಯನ್ಸ್ ಜಿಲ್ಲಾ ಬ್ಯಾಡ್ಮಿಂಟನ್ ಸಹ ಸಂಯೋಜಕ ಲ.ಜಯರಾಮ್ ದೇರಪ್ಪಜ್ಜನಮನೆ ಕಾರ್ಯಕ್ರಮ ನಿರೂಪಿಸಿದರು.

ಸಂಜೆ ಸುಳ್ಯ ಲಯನ್ಸ್ ಸೇವಾ ಸದನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಲಯನ್ಸ್ ಜಿಲ್ಲಾ ರಾಜ್ಯಪಾಲರಾದ ಲ. ಬಿ.ಎಂ.ಭಾರತಿಯವರು ವಿಜೇತರಿಗೆ ಬಹುಮಾನ ವಿತರಿಸಿದರು, ವೇದಿಕೆಯಲ್ಲಿ ಲಯನ್ಸ್ ಜಿಲ್ಲಾ ನಿಕಟಪೂರ್ವ ರಾಜ್ಯಪಾಲ ಲ. ಮೆಲ್ವಿನ್ ಡಿಸೋಜಾ, ಲಯನ್ಸ್ ಜಿಲ್ಲಾ ಕಾರ್ಯದರ್ಶಿ ಲ. ಗೀತಾ ರಾವ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಲ. ಡಾ.ಲಕ್ಷ್ಮೀಶ್, ಲ. ಜಯರಾಮ್ ದೇರಪ್ಪಜ್ಜನಮನೆ, ಲ. ರಾಮಕೃಷ್ಣ ರೈ, ಲ. ವೀರಪ್ಪ ಗೌಡ ಮತ್ತಿತರರು ವೇದಿಕೆ ಯಲ್ಲಿ ಉಪಸ್ಥಿತರಿದ್ದರು. ಲ. ತೇಜಸ್ವಿನಿ ಕಿರಣ್ ಕಾರ್ಯಕ್ರಮ ನಿರೂಪಿಸಿದರು.