ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಮಹಾಸಭೆ

0

ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ ಆ. 25ರಂದು ಮರಾಟಿ ಸಭಾ ಭವನ ಗಿರಿದರ್ಶಿನಿಯಲ್ಲಿ ಸಂಘದ ಅಧ್ಯಕ್ಷ ಜನಾರ್ಧನ ಬಿ ಕುರುಂಜಿಭಾಗ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ಸ್ಥಾಪಕಾಧ್ಯಕ್ಷ ದೇವಪ್ಪ ನಾಯ್ಕ ಹೊನ್ನೇಡಿ, ಸ್ಥಾಪಕ ಕಾರ್ಯದರ್ಶಿ ಗೋಪಾಲ ನಾಯ್ಕ್ ದೊಡ್ಡೇರಿ, ಗೌರವಾಧ್ಯಕ್ಷ ಸೀತಾನಂದ ಬೇರ್ಪಡ್ಕ ಅತಿಥಿಗಳಾಗಿ ಭಾಗವಹಿಸಿದ್ದರು.

ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಗಿರಿಜಾ ಜನಾರ್ಧನ್ ಕೊಡಿಯಾಲಬೈಲು, ಯುವ ವೇದಿಕೆಯ ಅಧ್ಯಕ್ಷ ಮೋಹನ್ ಪೆರಾಜೆ ಮತ್ತು ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ನಾಯ್ಕ್ ಅಜ್ಜಾವರ ಆಡಳಿತ ಮಂಡಳಿ ವರದಿ ವಾಚಿಸಿದರು. ಕೋಶಾಧಿಕಾರಿ ಜನಾರ್ಧನ ನಾಯ್ಕ್ ಕೇರ್ಪಳ ಲೆಕ್ಕಪತ್ರ ಮಂಡಿಸಿದರು. ಯುವ ವೇದಿಕೆ ಕಾರ್ಯದರ್ಶಿ ಉದಯಕುಮಾರ್ ಮಾಣಿಬೆಟ್ಟು ಯುವ ವೇದಿಕೆಯ ವರದಿ ಮತ್ತು ಮಹಿಳಾ ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಕುಸುಮಾ ಜನಾರ್ಧನ್ ಮಹಿಳಾ ವೇದಿಕೆಯ ವರದಿ ವಾಚಿಸಿದರು. ಜೊತೆ ಕಾರ್ಯದರ್ಶಿ ಧರ್ಮಣ್ಣ ನಾಯ್ಕ್ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಈಶ್ವರ ವಾರಣಾಶಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಶ್ರೀಮತಿ ಗಿರಿಜಾ ಜನಾರ್ಧನ್ ಪ್ರಾರ್ಥಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಅಗಲಿದ ಸಮಾಜ ಬಾಂಧವರಿಗಾಗಿ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಸಮಾಜದಲ್ಲಿ ವಿಶೇಷ ಸಾಧನೆ ಮಾಡಿದ ಮತ್ತು ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ಕೃಷಿ ಕ್ಷೇತ್ರದ ಸಾಧನೆಗಾಗಿ ಎ.ಕೆ. ನಾಯ್ಕ್ ಅಮೆಬೈಲು, ನಿವೃತ್ತ ಯೋಧ ಜಗನ್ನಾಥ ಪಂಜ, ಸಂಗೀತ ಕ್ಷೇತ್ರದ ಸುಭಾಷ್ ಡಿ.ಕೆ, ಕ್ರೀಡಾ ಕ್ಷೇತ್ರದ ಸಾಧಕ ಶಿಕ್ಷಕ ಕೊರಗಪ್ಪ ನಾಯ್ಕ್ ಕುರುಂಬುಡೇಲು, ಶೈಕ್ಷಣಿಕ ಸಾಧನೆಗಾಗಿ ಡಾ. ರಮ್ಯ ಹೆಚ್.ಡಿ, ಕಲಾ ಕ್ಷೇತ್ರದ ಸೇವೆಗಾಗಿ ಮಾಯಿಲಪ್ಪ ಮಂಡೆಕೋಲು, ಧಾರ್ಮಿಕ ಕ್ಷೇತ್ರದಿಂದ ಜನಾರ್ಧನ ನಾಯ್ಕ್ ಕಲ್ಲಡ್ಕ, ಕಾಷ್ಠಶಿಲ್ಪಿ ಹರಿಶ್ಚಂದ್ರ ಪಂಜರನ್ನು ಸನ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯದರ್ಶಿ ಭವಾನಿಶಂಕರ ಕಲ್ಮಡ್ಕ ಸನ್ಮಾನಿತರ ಪಟ್ಟಿ ವಾಚಿಸಿದರು. ಪ್ರತಿಭಾ ಪುರಸ್ಕಾರದ ಪಟ್ಟಿಯನ್ನು ಜನಾರ್ಧನ ನಾಯ್ಕ್ ಕೇರ್ಪಳ ವಾಚಿಸಿದರು.

ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಯಲ್ಲಿ ಶೇ. 80ಕ್ಕಿಂತ ಹೆಚ್ಚು ಅಂಕ‌ ಪಡೆದ ಸಮಾಜ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಬಳಿಕ ಕಾರ್ಯಕಾರಿ ಸಮಿತಿ, ಮಹಿಳಾ‌ ಸಮಿತಿ ‌ಮತ್ತು ಯುವ ವೇದಿಕೆಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ಕ್ರೀಡಾ ಕಾರ್ಯದರ್ಶಿ ರಘುನಾಥ್ ಜಟ್ಟಿಪಳ್ಳ ಕ್ರೀಡಾ ವಿಜೇತರ ಪಟ್ಟಿ ವಾಚಿಸಿ ಗಣ್ಯರು ಬಹುಮಾನ ವಿತರಿಸಿದರು. ಸಮಾಜ ಬಾಂಧವರು ಸಭೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.