ಸುಳ್ಯದ ಸಾಂದೀಪ ವಿಶೇಷಚೇತನ ವಿದ್ಯಾರ್ಥಿಗಳೊಂದಿಗೆ ಸಹಭೋಜನ ಕಾರ್ಯಕ್ರಮ
ಭಾರತ ಸೇವಾದಳ ಜಿಲ್ಲಾ ಸಮಿತಿ ದ.ಕ ಮತ್ತು ಭಾರತ ಸೇವಾದಳ ಸುಳ್ಯ ಸಮಿತಿ ವತಿಯಿಂದ ಭಾರತ ಸೇವಾದಳದ ಸ್ಥಾಪಕರಾದ ಪದ್ಮಭೂಷಣ ಡಾ.ನಾ.ಸು.ಹರ್ಡೀಕರ್ ರವರ 49ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಸುಳ್ಯದ ಸಾಂದೀಪ ಶಾಲೆಯ ವಿಶೇಷಚೇತನ ವಿದ್ಯಾರ್ಥಿಗಳೊಂದಿಗೆ ಸಹಭೋಜನ ಕಾರ್ಯಕ್ರಮ ಆ.26ರಂದು ಶಾಲೆಯಲ್ಲಿ ನಡೆಯಿತು.
ಸಾಮಾಜಿಕ ಧುರೀಣ ಹಾಗೂ ನಿವೃತ್ತ ಯೋಧ ಅಡ್ಡಂತ್ತಡ್ಕ ದೇರಣ್ಣ ಗೌಡರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಭಾರತ ಸೇವಾದಳ ದ.ಕ ಜಿಲ್ಲಾ ಸಮಿತಿ ಅಧ್ಯಕ್ಷ ಜಯರಾಮ ರೈ ಬಳೆಜ್ಜ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಮಿತಿಯ ಸಂಘಟಕ ಮಂಜೇಗೌಡ, ಸುಳ್ಯ ತಾಲೂಕು ಸೇವಾದಳದ ಅಧ್ಯಕ್ಷ ಫ್ರೋ.ದಾಮೋದರ ಗೌಡ, ಚಂದ್ರಶೇಖರ ನಂಜೆ, ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಕೃಷ್ಣ ರೈ, ಸಾಂದೀಪ ವಿಶೇಷ ಶಾಲೆಯ ಸಂಚಾಲಕ ಎಂ.ಬಿ.ಸದಾಶಿವ, ಶ್ರೀಮತಿ ಚಂದ್ರಕಲಾ ದೇರಣ್ಣ ಗೌಡ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಹರಿಣಿ ಸದಾಶಿವ ಉಪಸ್ಥಿತರಿದ್ದರು.
ಇದೇ ಸಂದರ್ಭ ತಾಲೂಕು ಸೇವಾದಳ ಸಮಿತಿಯ ವತಿಯಿಂದ ಜಾಲ್ಸೂರಿನ ಪಯಸ್ವಿನಿ ಪ್ರೌಢ ಶಾಲೆಗೆ ಡಂಬಲ್ಸ್ ಸೆಟ್ ಅನ್ನು ಕೊಡುಗೆಯಾಗಿ ನೀಡಲಾಯಿತು. ಇದೇ ಸಂದರ್ಭ ಭಾರತ ಸೇವಾದಳ ದ.ಕ ಜಿಲ್ಲಾ ಸಮಿತಿ ಅಧ್ಯಕ್ಷ ಜಯರಾಮ ರೈ ಬಳೆಜ್ಜ ರವರನ್ನು ಸಾಂದೀಪ್ ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ಎಂ.ಬಿ.ಫೌಂಡೇಶನ್ ಟ್ರಸ್ಟಿ, ಪತ್ರಕರ್ತ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.