ಮಂಡೆಕೋಲು-ಅಜ್ಜಾವರ ಗಡಿಭಾಗ ರಸ್ತೆ ಬದಿಯಲ್ಲಿದ್ದ ಮರ ತೆರವು

0

ಮಂಡೆಕೋಲು – ಅಜ್ಜಾವರ ಗ್ರಾಮ ಪಂಚಾಯತ್ ನ ಗಡಿಭಾಗವಾದ ಜೇಡಿಗುಂಡಿ – ಇರುಂಬಳ್ಳದಲ್ಲಿ ರಸ್ತೆ ಬದಿಯಲ್ಲಿದ್ದ ಅಪಾಯಕಾರಿ ಮರವನ್ನು ಮಂಡೆಕೋಲು ಪಂಚಾಯತ್ ಮನವಿಯ ಮೇರೆಗೆ ಅರಣ್ಯ ಇಲಾಖೆ ತೆರವು‌ ಮಾಡಿರುವುದಾಗಿ ತಿಳಿದುಬಂದಿದೆ.

ರಸ್ತೆ ಬದಿಯಲ್ಲಿ ಅಪಾಯಕಾರಿ‌ಮರ ಇರುವುದು ಹಾಗೂ ಅಪಾಯ ಎದುರಾಗುವ ಸಂಭವ ಇರುವುದರಿಂದ ಮಂಡೆಕೋಲು ಗ್ರಾ.ಪಂ.‌ಸದಸ್ಯೆ ತಿಲಕ ಕುತ್ಯಾಡಿ ಯವರು ಗ್ರಾ.ಪಂ. ಮನವಿ ಮಾಡಿದ್ದರು. ಪಂಚಾಯತ್‌ನಿಂದ ಸುಳ್ಯ‌ ತಹಶೀಲ್ದಾರ್ ಹಾಗೂ ಅರಣ್ಯ ಇಲಾಖೆಗೆ‌ ಪತ್ರ ಬರೆದು‌ ತೆರವು ಮಾಡುವಂತೆ ಮನವಿ ಸಲ್ಲಿಸಲಾಯಿತು. ಇದೀಗ ಅರಣ್ಯ ಇಲಾಖೆಯವರು ಅಪಾಯಕಾರಿ ಮರವನ್ನು ತೆರವು ಮಾಡಿರುವುದಾಗಿ ತಿಳಿದುಬಂದಿದೆ. ಈ ಸಂದರ್ಭ ಮೆಸ್ಕಾಂ ಅಧಿಕಾರಿಗಳು ಮತ್ತು ಸ್ಥಳೀಯರು ಇದ್ದರು.