ಡಾ. ಕೆ. ವಿ. ಚಿದಾನಂದರಿಗೆ ವಿಶಿಷ್ಟ ಸೇವಾ ಪುರಸ್ಕಾರ

0

ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಹಾಗೂ ಮೈಸೂರು
ವೈದ್ಯಕೀಯ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘ ಇವುಗಳ ಆಶ್ರಯದಲ್ಲಿ ಮೈಸೂರು ವೈದ್ಯಕೀಯ
ಕಾಲೇಜು ಇದರ ಶತಮಾನೋತ್ಸವದ ಅಂಗವಾಗಿ ಗ್ರಾಮೀಣ ಪ್ರದೇಶದ ಜನರ ವೈದ್ಯಕೀಯ ಸೇವೆಗಾಗಿ ಹಾಗೂ ಹಲವಾರು ವಿದ್ಯಾಸಂಸ್ಥೆಗಳನ್ನು ಮುನ್ನಡೆಸುತ್ತಿರುವ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷ ಡಾ| ಕೆ. ವಿ. ಚಿದಾನಂದ ಇವರನ್ನು “ವಿಶಿಷ್ಟ ಸೇವಾ ಪುರಸ್ಕಾರ” ನೀಡಿ ಮೈಸೂರು ವೈದ್ಯಕಿಯ ಕಾಲೇಜಿನಲ್ಲಿ ಸನ್ಮಾನಿಸಲಾಯಿತು. ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯ ಬೆಂಗಳೂರು ಇದರ ವಿಶ್ರಾಂತ ಕುಲಪತಿಗಳಾದ ಡಾ. ಕಾಂತ ಎಸ್. ಜಾಧವ್ ಇವರು ಸನ್ಮಾನವನ್ನು ನೆರವೇರಿಸಿದರು.