ಜಯನಗರ: ಶ್ರೀ ಗಜಾನನ ಭಜನಾ ಮಂದಿರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವೈಭವದ ಶೋಭಾಯಾತ್ರೆ

0

ರಸ್ತೆಯ ಉದ್ದಕ್ಕೂ ಅಳವಡಿಸಿದ ಮೊಸರು ಕುಡಿಕೆ ಒಡೆದ ಯುವಕರ ತಂಡ

ಜಯನಗರ ಶ್ರೀ ಗಜಾನನ ಭಜನಾ ಮಂದಿರದ ವತಿಯಿಂದ ಇಂದು ಆಯೋಜಿಸಲಾಗಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗದ ಪರವಾಗಿ ಹಳೆಗೇಟು ವಸಂತ ಕಟ್ಟೆಯಿಂದ ಜಯನಗರ ಭಜನಾ ಮಂದಿರದವರೆಗೆ ವೈಭವದ ಶೋಭಾ ಯಾತ್ರೆ ನಡೆಯಿತು.

ಹಳೆಗೇಟು ವಸಂತಕಟ್ಟೆಯಿಂದ ಜಯನಗರ ಗಜಾನನ ಭಜನಾ ಮಂದಿರದವರೆಗೆ ಮೆರವಣಿಗೆ ಸಾಗಿತು.

ಈ ಸಂದರ್ಭದಲ್ಲಿ ರಸ್ತೆಯ ಉದ್ದಕ್ಕೂ ಅಳವಡಿಸಲಾಗಿದ್ದ ಸುಮಾರು 18 ಮೊಸರು ಕುಡಿಕೆಗಳನ್ನು ಜಯನಗರ ಪರಿಸರದ ಯುವಕರ ತಂಡ ಒಡೆದು ಮೆರವಣಿಗೆಗೆ ಶೋಭೆ ತಂದರು.

ಡಿಜೆ ಧ್ವನಿಗೆ ಕುಣಿದು ಕುಪ್ಪಳಿಸಿದ ಮಕ್ಕಳು ಹಾಗೂ ಸ್ಥಳೀಯ ಯುವಕರು ಸಂಭ್ರಮವಾಗಿ ಅಷ್ಟಮಿ ಕಾರ್ಯಕ್ರಮವನ್ನು ಆಚರಣೆ ಮಾಡಿದರು.

ಮೊಸರು ಕುಡಿಕೆ ಹೊಡೆಯುವ ಸ್ಪರ್ಧೆಯಲ್ಲಿ ಶ್ರೀ ಗಜಾನನ ಭಜನಾ ಮಂದಿರದ ತಂಡ, ವಿಕ್ರಮ ಯುವಕ ಮಂಡಲದ ತಂಡ, ಜಯನಗರ ಗೆಳೆಯರ ಬಳಗ, ಜಯನಗರ ನಾಗಬ್ರಹ್ಮ ತಂಡ ಭಾಗವಹಿಸಿದ್ದವು.

ಶೋಭ ಯಾತ್ರೆಯಲ್ಲಿ ನೂರಾರು ಮಂದಿ ಭಕ್ತಾದಿಗಳು ಭಾಗವಹಿಸಿದ್ದರು.