ಸುಳ್ಯದ ಸಾಂದೀಪ ವಿಶೇಷಚೇತನ ವಿದ್ಯಾರ್ಥಿಗಳೊಂದಿಗೆ 85ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಅಡ್ಡಂತ್ತಡ್ಕ ದೇರಣ್ಣ ಗೌಡ

0

ಸಾಂದೀಪ್ ವಿಶೇಷಚೇತನ ಶಾಲೆಗೆ ರೂ 1 ಲಕ್ಷ ದೇಣಿಗೆ

ಸಾಮಾಜಿಕ ಧುರೀಣ ಹಾಗೂ ನಿವೃತ್ತ ಯೋಧ ಅಡ್ಡಂತ್ತಡ್ಕ ದೇರಣ್ಣ ಗೌಡರು ತಮ್ಮ 85ನೇ ವರ್ಷದ ಹುಟ್ಟುಹಬ್ಬವನ್ನು ಸುಳ್ಯದ ಸಾಂದೀಪ ವಿಶೇಷಚೇತನ ವಿದ್ಯಾರ್ಥಿಗಳೊಂದಿಗೆ ಆ.26ರಂದು ಆಚರಿಸಿಕೊಂಡರು.

ಇದೇ ಸಂದರ್ಭ ಅವರು ಸಾಂದೀಪ್ ವಿಶೇಷಚೇತನ ಶಾಲೆಗೆ ರೂ 1 ಲಕ್ಷ ಚೆಕ್ ನ್ನು ಶಾಲಾ ಸಂಚಾಲಕ ಎಂ.ಬಿ.ಸದಾಶಿವರವರಿಗೆ ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಅಡ್ಡಂತ್ತಡ್ಕ ದೇರಣ್ಣ ಗೌಡ ಹಾಗೂ ಶ್ರೀಮತಿ ಚಂದ್ರಕಲಾ ದೇರಣ್ಣ ಗೌಡ ದಂಪತಿಗಳನ್ನು ಸಂಸ್ಥೆಯ ವತಿಯಿಂದ ಹಾಗೂ ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ಗೌರವಿಸಲಾಯಿತು.

ಕೆ.ಎಂ.ಎಫ್ ಉಪಾಧ್ಯಕ್ಷ ಜಯರಾಮ ರೈ ಬಳೆಜ್ಜ, ಸುಳ್ಯ ತಾಲೂಕು ಸೇವಾದಳದ ಅಧ್ಯಕ್ಷ ಫ್ರೋ.ದಾಮೋದರ ಗೌಡ, ಚಂದ್ರಶೇಖರ ನಂಜೆ, ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಕೃಷ್ಣ ರೈ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಹರಿಣಿ ಸದಾಶಿವ, ಎಂ.ಬಿ ಸಲಹಾ ಸಮಿತಿ ಸದಸ್ಯ ಯಶ್ವಿತ್ ಕಾಳಮ್ಮನೆ, ಸುಳ್ಯ ಲಯನ್ಸ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.

ಎಂ.ಬಿ.ಫೌಂಡೇಶನ್ ಟ್ರಸ್ಟಿ, ಪತ್ರಕರ್ತ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.