ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯು ಪಯಸ್ವಿನಿ ಪ್ರೌಢಶಾಲೆ ಜಾಲ್ಸೂರಿನಲ್ಲಿ ನಡೆಯಿತು. ಟ್ರೆಡಿಶನಲ್ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಸಂಧ್ಯಾ ಪಿ. 9ನೇ ತರಗತಿ ದ್ವಿತೀಯ ಸ್ಥಾನ ,ರಿದಮಿಕ್ ವಿಭಾಗದಲ್ಲಿ ಕೃಷ್ಕ್ರಾ.ಪಿ .ಎಚ್ 8ನೇ ತರಗತಿ ಪ್ರಥಮ ಸ್ಥಾನ ,ವರ್ಷ ಕೆ.ಜಿ 7ನೇ ತರಗತಿ ಪ್ರಥಮ ಸ್ಥಾನ ,ಸಿಂಚನ್ 7ನೇ ತರಗತಿ ಪ್ರಥಮ ಸ್ಥಾನ, ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.