ಕೆವಿಜಿ ಅಮರಜ್ಯೋತಿ ಪಿಯು ಕಾಲೇಜಿನಲ್ಲಿ ಕೃಷ್ಣಾಷ್ಟಮಿಯ ಸಂಭ್ರಮ

0

ಶ್ರೀಕೃಷ್ಣ ಕ್ರಿಯಾಶೀಲತೆಯ ಸಂಕೇತ : ಡಾ. ಯಶೋದಾ ರಾಮಚಂದ್ರ

ಕೃಷ್ಣಾಷ್ಟಮಿಯ ಆಚರಣೆಯ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳಿಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಆಚರಣೆಯ ವೈಶಿಷ್ಟ್ಯದ ಬಗ್ಗೆ ಮಕ್ಕಳಲ್ಲಿ ಮನವರಿಕೆ ಮಾಡುವ ಉದ್ದೇಶದಿಂದ ಕೃಷ್ಣಾಷ್ಟಮಿಯ ಹಿನ್ನೆಲೆ ಮತ್ತು ಆಚರಣೆಯ ವಿಷಯವಾಗಿ ಮಕ್ಕಳಿಗೆ ಭಾಷಣ ಕಾರ್ಯಕ್ರಮವನ್ನು ಆಯೋಜಿಸಿ, ಮತ್ತು ಕೃಷ್ಣನ ರೇಖಾಚಿತ್ರ ,ಕೃಷ್ಣನ ಮುಖ ಚಹರೆ ಅಲಂಕಾರ ಮತ್ತು ಕೃಷ್ಣನ ಲೀಲೆಯ ಏಕಪಾತ್ರ ಅಭಿನಯಗಳನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಯಶೋದಾ ರಾಮಚಂದ್ರ ರವರು ಕೃಷ್ಣ ಒಬ್ಬ ದೇವ ಪುರುಷನಷ್ಟೇ ಅಲ್ಲ, ಮಾನಸಿಕ ತಜ್ಞ ಆದ ಕಾರಣ ಅರ್ಜುನನ ಮನಸ್ಸನ್ನು ಬದಲಿಸಲು ಸಾಧ್ಯವಾಯಿತು ಜೊತೆಗೆ ಕೃಷ್ಣ ಲೀಲೆಗಳೆ ಹೆಚ್ಚಿರುವುದು ಅಂದರೆ ಯಾವ ದೇವರೇ ಆಗಲಿ ಮನುಷ್ಯರೇ ಆಗಲಿ ಸಣ್ಣ ವಯಸ್ಸಿನಲ್ಲಿ ಸಾಧಕ ರಾಗಬಹುದು ಆದಕಾರಣ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಸಾಧಕರಾಗಬೇಕು ಎಂಬ ಸಂದೇಶವನ್ನು ವಿದ್ಯಾರ್ಥಿಗಳಿಗೆ ನೀಡಿದರು.

ಕಾರ್ಯಕ್ರಮದ ತೀರ್ಪುಗಾರರಾಗಿ ಕೆವಿಜಿ ಐಟಿಐನ ಕಚೇರಿ ಅಧಿಕ್ಷಕರಾದ ಭವಾನಿಶಂಕರ ಅಡ್ತಲೆ, ಕೆವಿಜಿ ಐಪಿಎಸ್ ನ ಹೇಮಲತಾ, ಸುಜಿತ್, ಹಾಗೂ ಮೆಲ್ವಿನ್ ರವರು ಉಪಸ್ಥಿತರಿದ್ದರು. ಸಂಭ್ರಮದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರಾದ ದೀಪಕ್ ವೈ.ಆರ್ ಹಾಗೂ ಎಲ್ಲಾ ಬೋಧಕ ಬೋಧಕೇತರ ವರ್ಗದವರು ಉಪಸ್ಥಿತರಿದ್ದು, ಕಾಲೇಜಿನ ಸಂಸ್ಥಾಪಕರಾದ ಡಾ.ರೇಣುಕಾ ಪ್ರಸಾದ್ ಕೆ ವಿ, ಕಾಲೇಜಿನ ಕಾರ್ಯನಿರ್ವಹಣಾಧಿಕಾರಿಗಳಾದ ಡಾ. ಉಜ್ವಲ್ ಯು.ಜೆ ಮತ್ತು ಆಡಳಿತ ವರ್ಗದವರು ಶುಭ ಹಾರೈಸಿದರು.