ಆಲೆಟ್ಟಿ ಶ್ರೀ ಸದಾಶಿವ ದೇವಳದಲ್ಲಿ ವರ್ಷಂಪ್ರತಿ ಜರುಗುವ ಶ್ರೀ ಕೃಷ್ಣ ಜನ್ಮಾಷ್ಠಮಿಯು ಸತ್ಯನಾರಾಯಣ ದೇವರ ಪೂಜೆ ಹಾಗೂ ವಿವಿಧ ಅಟೋಟ ಸ್ಪರ್ಧೆಗಳು
ಆ.26 ರಂದು ಜರುಗಿತು.
ಬೆಳಗ್ಗೆ ಅರ್ಚಕ ಹರ್ಷಿತ್ ಬನ್ನಿಂತಾಯ ರವರ ನೇತೃತ್ವದಲ್ಲಿ ನಿತ್ಯ ಪೂಜೆಯು ನಡೆದು ಪುರೋಹಿತ್ ವೆಂಕಟೇಶ ಶಾಸ್ತ್ರೀಯವರ ನೇತೃತ್ವದಲ್ಲಿ ಸಾಮೂಹಿಕ ಸತ್ಯನಾರಾಯಣ ದೇವರ ಪೂಜೆಯು ನಡೆಯಿತು. ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ ಅನ್ನ ಸಂತರ್ಪಣೆಯಾಯಿತು.
ಸ್ಪರ್ಧಾ ಕಾರ್ಯಕ್ರಮ ಉದ್ಘಾಟನೆ:
ಪೂರ್ವಾಹ್ನ ಅಷ್ಠಮಿಯ ಪ್ರಯುಕ್ತ ಹಮ್ಮಿಕೊಂಡ ವಿವಿಧ ಸ್ಫರ್ಧಾ ಕಾರ್ಯಕ್ರಮವನ್ನು ರೋಟರಿ ಕ್ಲಬ್ ನಿಕಟ ಪೂರ್ವಾಧ್ಯಕ್ಷ ರೊ.ಗಿರಿಜಾಶಂಕರ ತುದಿಯಡ್ಕ ರವರು ಉದ್ಘಾಟಿಸಿ ಧಾರ್ಮಿಕ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ದೇವಳಕ್ಕೆ ದಾನಿಗಳ ಸಹಕಾರದಿಂದ ಹೊಸದಾಗಿ ಖರೀದಿಸಿದ 230 ಕುರ್ಚಿಗಳನ್ನು ಹಸ್ತಾಂತರ ಮಾಡಲಾಯಿತು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ ಅಧ್ಯಕ್ಷತೆ ವಹಿಸಿದ್ದರು. ಮೊಕ್ತೇಸರ ಶ್ರೀಪತಿ ಬೈಪಡಿತ್ತಾಯ ರವರು ದೇವಸ್ಥಾನದ
ಇ -ಹುಂಡಿಗೆ ನಗದು ಜಮೆ ಮಾಡುವ ಮೂಲಕ ಚಾಲನೆ ನೀಡಿದರು.
ವೇದಿಕೆಯಲ್ಲಿ ಶ್ರೀಮತಿ ಶಾಂತಾ ಬೈಪಡಿತ್ತಾಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸತೀಶ್ ಕುಂಭಕೋಡು, ಅಚ್ಚುತ ಮಣಿಯಾಣಿ ಆಲೆಟ್ಟಿ, ಹರಿಪ್ರಸಾದ್ ಗಬ್ಬಲ್ಕಜೆ, ಮಮತಾ ನಾರ್ಕೋಡು, ನಳಿನಿ ರೈ ಆಲೆಟ್ಟಿ ಉಪಸ್ಥಿತರಿದ್ದರು.
ಶ್ರೀಮತಿ ಗೌರಿ ಆಲೆಟ್ಟಿ ಪ್ರಾರ್ಥಿಸಿದರು. ಸೇವಾ ಸಮಿತಿ ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಶ್ರೀಮತಿ ಮಮತಾ ನಾರ್ಕೋಡು ವಂದಿಸಿದರು. ಭಜನಾ ಸಂಘದ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಭಜನಾ ಸಂಘದ ಸದಸ್ಯರು ಹಾಗೂ ಜನನಿ ಫ್ರೆಂಡ್ಸ್ ಕ್ಲಬ್ ಸದಸ್ಯರು ಸಹಕರಿಸಿದರು.
ಅಂಗನವಾಡಿ
ಮಕ್ಕಳಿಗೆ ಕಾಳು ಹೆಕ್ಕುವ ಮತ್ತು ಕಪ್ಪೆ ಜಿಗಿತ ಸ್ಪರ್ಧೆ ಆಯೋಜಿಸಲಾಗಿತ್ತು.
ಪುರುಷರಿಗೆ ಹಾಗೂ ಮಹಿಳೆಯರಿಗೆ, ಮಕ್ಕಳಿಗೆ ಮಡಕೆ ಒಡೆಯುವ ಸ್ಪರ್ಧೆ, ಓಟದ ಸ್ಪರ್ಧೆ, ಭಕ್ತಿ ಗೀತೆ, ಸಂಗೀತ ಕುರ್ಚಿ, ಗುಂಪು ಸ್ಪರ್ಧೆ ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಏರ್ಪಡಿಸಲಾಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಂಜೆ ಅಷ್ಠಮಿ ಪ್ರಯುಕ್ತ ವಿಶೇಷವಾಗಿ ಭಜನಾ ಕಾರ್ಯಕ್ರಮ ನಡೆಯಿತು.
ದೇವಸ್ಥಾನದ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ
ಭಜನಾ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಸ್ಥಳೀಯ ಭಕ್ತಾದಿಗಳು ಭಾಗವಹಿಸಿದರು.