ಸುಳ್ಯ ಜಟ್ಟಿಪಳ್ಳ ನಿವಾಸಿ ಗೋಪಾಲ ಬೆಳ್ಚಪ್ಪಾಡ ಎಂಬವರು ಅಲ್ಪಕಾಲದ ಅಸೌಖ್ಯದಿಂದ ಆ.27 ರಂದು ನಿಧನರಾದರು.
ಅವರಿಗೆ 68 ವರ್ಷ ವಯಸ್ಸಾಗಿತ್ತು.
ಆ.25 ರಂದು ಗೋಪಾಲರ ಅರೋಗ್ಯದಲ್ಲಿ ಏರುಪೇರು ಕಂಡು ಬಂದು ಅವರನ್ನು ಸುಳ್ಯ ಜ್ಯೋತಿ ಆಸ್ಪತ್ರೆಗೆ ಮನೆಯವರು ಕರೆದುಕೊಂಡು ಬಂದರು. ಅಲ್ಲಿ ಚಿಕಿತ್ಸೆ ಕೊಡಿಸಿ, ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಇಂದು ಮುಂಜಾನೆ ಮಂಗಳೂರು ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು.
ಗೋಪಾಲರು ಸುಳ್ಯದಲ್ಲಿ ಪ್ಲಂಬಿಂಗ್ ಕೆಲಸವನ್ನು ಮಾಡುತ್ತಿದ್ದರು.
ಮೃತರು ಪತ್ನಿ ಶ್ರೀಮತಿ ರೇವತಿ, ಮಕ್ಕಳಾದ ಅನಿಲ್, ಪುತ್ರಿ ಜಯಲಕ್ಷ್ಮಿ, ಸೊಸೆ ಅನನ್ಯ ಅನಿಲ್, ಅಳಿಯ ಗೋಪಾಲಕೃಷ್ಣ ಜಯಲಕ್ಷ್ಮಿ ಯವರನ್ನು ಅಗಲಿದ್ದಾರೆ.