ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರದ ವಠಾರದದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವವು ಆ.27ರಂದು ಜರುಗಿತು.
ಬೆಳಿಗ್ಗೆ ಶ್ರೀ ಆತ್ಮಾರಾಮ ಭಜನಾ ಮಂದಿರದಲ್ಲಿ ಪೂಜಾ ಕಾರ್ಯಕ್ರಮ, ನಡೆಯಿತು.
ಸ್ಪರ್ಧಾ ಕಾರ್ಯಕ್ರಮವು ಕನಕಮಜಲು ಗ್ರಾಮದ ಹಿಂದೂ ಬಾಂಧವರಿಗೆ ಮಾತ್ರ ಮೀಸಲಾಗಿದ್ದು, ಪುಟಾಣಿ ಮಕ್ಕಳಿಗೆ ಮುದ್ದುಕೃಷ್ಣನ ವೇಷ ಹಾಕುವ ಸ್ಪರ್ಧೆ, ಪುರುಷರಿಗೆ ಕಬಡ್ಡಿ, ಮೊಸರು ಕುಡಿಕೆ, ಹಗ್ಗಜಗ್ಗಾಟ, ಕೇರಂ, ಲೂಡ, ಶಟ್ಲ್, ಲಕ್ಕೀಗೇಮ್, ಮಾತೆಯರಿಗೆ ಹೂಕಟ್ಟುವ ಸ್ಪರ್ಧೆ, ಜಾರುಗಂಬ ನಡಿಗೆ, ಮಡಿಕೆ ಒಡೆಯುವುದು, ಹಗ್ಗಜಗ್ಗಾಟ, ಸಂಗೀತ ಕುರ್ಚಿ, ಲಕ್ಕೀಗೇಮ್, ಐದು ವರ್ಷದೊಳಗಿನ ಮಕ್ಕಳಿಗೆ ಕಾಳು ಹೆಕ್ಕುವುದು, ಕಪ್ಪೆ ಜಿಗಿತ, 1ನೇ ತರಗತಿ ಮಕ್ಕಳಿಗೆ ಲಿಂಬೆಚಮಚ ಓಟ, ಬಕೆಟ್ ಗೆ ಬಾಲ್ ಹಾಕುವುದು, ಎರಡು ಮತ್ತು ಮೂರನೇ ತರಗತಿ ಮಕ್ಕಳಿಗೆ ಬಾಟಲಿಗೆ ನೀರು ತುಂಬಿಸುವುದು, ಒಂಟಿ ಕಾಲು ಓಟ, 4 ಮತ್ತು 5ನೇ ತರಗತಿ ವಿದ್ಯಾರ್ಥಿಗಳಿಗೆ ಸ್ಮರಣ ಶಕ್ತಿ, ಚಮಚದಲ್ಲಿ ಕಾಳು ಹೆಕ್ಕುವುದು, 6 ಮತ್ತು 7ನೇ ತರಗತಿ ಮಕ್ಕಳಿಗೆ ಔಷಧಿ ಗಿಡಗಳ ಹೆಸರು ಬರೆಯುವ ಸ್ಪರ್ಧೆ, ಗೋಣಿಚೀಲ ಓಟ, 7ನೇ ತರಗತಿ ಮೇಲ್ಪಟ್ಟು ಸಾರ್ವಜನಿಕರಿಗೆ ರಸಪ್ರಶ್ನೆ ಸ್ಪರ್ಧೆಗಳು ನಡೆದವು.