ಸುಳ್ಯ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ತಾಲೂಕಿನ ವಿಕಲಚೇತನರಿಗೆ ಗುರುತಿನ ಚೀಟಿ ನೀಡುವ ಮತ್ತು ರಿನೀವಲ್ ಮಾಡುವ ಕ್ಯಾಂಪ್
ವಿಕಲಚೇತನರ ಇಲಾಖೆ ಮತ್ತು ಆರೋಗ್ಯ ಇಲಾಖೆಯ ವತಿಯಿಂದ ಜಂಟಿಯಾಗಿ ನಡೆಯಿತು.
ತಾಲೂಕು ಪಂಚಾಯತ್ ನ ವಿಕಲ ಚೇತನರ ಇಲಾಖೆಯ ಎಂ.ಆರ್.ಡಬ್ಲ್ಯೂ ಚಂದ್ರಶೇಖರ್, ನಗರ ಪಂಚಾಯತ್ ವಿಕಲಚೇತನರ ಇಲಾಖೆಯ ಮೇಲ್ವಿಚಾರಕರಾದ ಯು.ಆರ್.ಡಬ್ಲ್ಯೂ ಪ್ರವೀಣ್ ನಾಯಕ್, ಬಾಳಿಲ ವಿ.ಆರ್.ಡಬ್ಲ್ಯೂ ಕೃಷ್ಣಪ್ರಸಾದ್ ಗುತ್ತಿಗಾರು ಕಾವೇರಿ, ಜಾಲಸೂರು ಸದಾನಂದ, ಪುಷ್ಪಶ್ರೀ ಬೆಳ್ಳಾರೆ, ಮೀನಾಕ್ಷಿ ಪಂಜ, ಸವಿತ ಮಂಡೆಕೋಲು, ಷಣ್ಮುಖ ಮರ್ಕಂಜ, ರಂಜಿನಿ ಮುರುಳ್ಯ, ಉಮ್ಮರ್ ಅಜ್ಜಾವರ, ಆರೋಗ್ಯ ಇಲಾಖೆಯ ಬಸವರಾಜ್, ಚಂದ್ರಪ್ಪ, ಗುರು ಪ್ರಸಾದ್, ಹಾಗೂ ದಾದಿ ನಯನ ಹಾಜರಿದ್ದರು.
ಡಾ. ಕರುಣಾಕರ್ ನೇತ್ರತ್ವದಲ್ಲಿ ಉಳಿದ ತಜ್ಞ ವೈದ್ಯರು ಸಹಕಾರ ನೀಡಿದರು. ಹಲವಾರು ಜನ ವಿಶೇಷ ಚೇತನರು ಇದರ ಪ್ರಯೋಜನ ಪಡೆದುಕೊಂಡರು.