ಸುಳ್ಯ :ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿದೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ

0

ಸಂಸ್ಥೆಯ ವಾರ್ಷಿಕ ವ್ಯವಹಾರ ರೂ. 53.22 ಕೋಟಿ, ನಿವ್ವಳ ಲಾಭ ರೂ. 5.26 ಲಕ್ಷ

ಸುಳ್ಯ ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ ಇದರ ೨೦೨೩ – ೨೪ನೇ ಸಾಲಿನ ವಾರ್ಷಿಕ ಮಹಾಸಭೆ ಆ. ೨೭ ರಂದು ಸುಳ್ಯ ಸಿಎ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.
ಸಂಘದ ಅಧ್ಯಕ್ಷರಾದ ಐ.ಕೆ. ಮಹಮ್ಮದ್ ಇಕ್ಬಾಲ್ ಎಲಿಮಲೆರವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು.


ಸಭೆಯ ಆರಂಭದಲ್ಲಿ ಸಂಘದ ಸಿಬ್ಬಂದಿ ಮುರಳೀಧರರವರು ಪ್ರಾರ್ಥನೆ ನೆರವೇರಿಸಿದರು. ಬಳಿಕ ಸಂಘದ ನಿರ್ದೇಶಕರಾದ ಶ್ರೀಮತಿ ಜೂಲಿಯಾ ಕ್ರಾಸ್ತರವರು ಗತವರ್ಷದಲ್ಲಿ ಅಗಲಿದ ಸದಸ್ಯರಿಗೆ ಶೃದ್ಧಾಂಜಲಿ ಅರ್ಪಿಸಿ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ನೆರವೇರಿಸಲಾಯಿತು.
ಪ್ರಾಸ್ತಾವಿಕ ಮಾತನಾಡಿದ ಸಂಘದ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿಮಲೆ ‘ನಮ್ಮ ಈ ಸಂಸ್ಥೆಯು ೨೪ ವರ್ಷಗಳನ್ನು ಪೂರೈಸಿ ಇದೀಗ ೨೫ ನೇ ವರ್ಷಕ್ಕೆ ಪಾದರ್ಪಣೆ ಗೊಳ್ಳುತ್ತಿದೆ. ಪ್ರಸ್ತುತ ಸಂಧರ್ಭದಲ್ಲಿ ನಮ್ಮ ಸಂಸ್ಥೆಯು ಬೆಳ್ಳಾರೆ,ಮತ್ತು ಈಶ್ವರ ಮಂಗಿಲದಲ್ಲಿ ಬ್ರಾಂಚ್ ಗಳನ್ನು ತೆರದು ಸದಸ್ಯರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ. ಇದೆಲ್ಲಾ ಆಗಲು ನಮ್ಮ ಸಹಕಾರ ಸಂಘದ ಸದಸ್ಯರ ಪ್ರೋತ್ಸಾಹದಿಂದ ಆಗಿದೆ. ಅಡಿಟ್ ವರ್ಗಿಕರಣ ದಲ್ಲಿ ‘ಎ’ತರಗತಿಯನ್ನು ಹೊಂದಿದ್ದು ಉತ್ತಮ ಸಾಧನೆಗಾಗಿ ದ. ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಸತತವಾಗಿ ಮೂರನೇ ಭಾರಿಗೆ ಉತ್ತಮ ಸಹಕಾರಿ ಸಂಘ ಪ್ರಶಸ್ತಿಯನ್ನು ಪಡೆದುಕ್ಕೊಂಡಿದೆ ಎಂದು ಸಂಘ ನಡೆದು ಬಂದ ಹಾದಿಯ ಬಗ್ಗೆ ಮಾತನಾಡಿದರು.


ಸಂಘದ ಮುಖ್ಯಕಾರ್ಯ ನಿರ್ವಾಹಣಾಧಿಕಾರಿ ಪ್ರಜ್ವಲ್ ನಾಯಕ್ ರವರು ಮಹಾಸಭೆಯ ನೋಟೀಸನ್ನು ಓದಿ ವರದಿ ಹಾಗೂ ಲೆಕ್ಕ ಪತ್ರವನ್ನು ಮಂಡಿಸಿ ಸಂಸ್ಥೆಯು ವಾರ್ಷಿಕ ಸುಮಾರು ೫೫ ಕೋಟಿ ರೂಪಾಯಿಗಳ ವ್ಯವಹಾರಗಳನ್ನು ಮಾಡಿದ್ದು ನಿವ್ವಳ ಲಾಭ ೫.೨೬ ಲಕ್ಷ ಆಗಿದೆ ಎಂದು ಸಭೆಗೆ ತಿಳಿಸಿದರು.
ಬಳಿಕ ೨೦೨೧-೨೨ನೇ ಸಾಲಿನ ಮಹಾಸಭೆಯ ನಿರ್ಣಯವನ್ನು ಸಭೆಯಲ್ಲಿ ದೃಢೀಕರಿಸಿ ೨೦೨೨-೨೩ನೇ ಸಾಲಿನ ವಾರ್ಷಿಕ ವರದಿಯನ್ನು ಅಂಗೀಕರಿಸುವ ಕುರಿತು ಮತ್ತು ಆರ್ಥಿಕ ತ:ಖೆಗಳನ್ನು ಪರಿಶೀಲಿಸಿ ಮತ್ತು ಚರ್ಚಿಸಿ ಕೈ ಚಪ್ಪಾಳೆಯ ಮೂಲಕ ಮಂಜೂರು ಮಾಡಲಾಯಿತು.


ಸಂಘದ ಶಾಖೆಗಳಾದ ಸುಳ್ಯ, ಬೆಳ್ಳಾರೆ ಮತ್ತು ಈಶ್ವರಮಂಗಲ ಶಾಖೆಯಲ್ಲಿ ಛಾಪಾ ಕಾಗದ, ಖಖಿಉS, ಓಇಈಖಿ ತೆರೆದಿದ್ದುಮೊಬೈಲ್ ಬ್ಯಾಂಕಿಗೆ ಸೌಲಭ್ಯವಿದ್ದು ಇದರ ಸದುಪಯೋಗವನ್ನು ಎಲ್ಲಾ ಸದಸ್ಯರು ಪಡೆದುಕೊಳ್ಳು ವಂತೆ ವಿನಂತಿಸಿದರು. ಸಂಘದಲ್ಲಿ ಸದಸ್ಯರ ಸಾಂತ್ವನ ನಿಧಿ ಯೋಜನೆಯನ್ನು ಪ್ರಾರಂಭಿಸಿದ್ದು ಎಲ್ಲಾ ಸದಸ್ಯರು ರೂ.೨೦೦ ರನ್ನು ಪಾವತಿಸಿ ಇದರ ಉಪಯೋಗವನ್ನು ಪಡೆದುಕೊಳ್ಳಬೇಕಾಗಿ ಕೇಳಿಕೊಂಡರು.
ಸಂಸ್ಥೆ ವತಿಯಿಂದ ಸುಳ್ಯ ತಾಲೂಕಿನ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮವು ನಡೆಯಿತು.
ವೇದಿಕೆಯಲ್ಲಿ ಉಪಾಧ್ಯಕ್ಷರಾದ ಮೋಹಿದೀನ್ ಹಾಜಿ ಕೆ ಎಂ, ಸಂಶುದ್ದೀನ್ ಎಸ್ ಅರಂಬೂರು,ಇಸ್ಮಾಯಿಲ್ ಕೆ ಎಂ,ಹಸೈನಾರ್ ಎ ಕೆ ಕಲ್ಲುಗುಂಡಿ, ಉಮ್ಮರ್ ಶಾಪಿ ಕುತಮಟ್ಟೆ, ಜಾರ್ಜ್ ಡಿ ಸೋಜ ಕನಿಕರಪಳ್ಳ, ಆಮಿನ ಎಸ್ ಜಯನಗರ, ಜೂಲಿಯಾನ ಕ್ರಾಸ್ತಾ, ಹಮೀದ್ ಕೆ ಎಂ ಉಪಸ್ಥಿತರಿದ್ದರು.
ಇಕ್ಬಾಲ್ ಎಲಿಮಲೆ ಸ್ವಾಗತಿಸಿ ಮೊಹಿಯದ್ದೀನ್ ಹಾಜಿ ವಂದಿಸಿದರು.ಸಂಘದ ಸಿಬ್ಬಂದಿಗಳು ಸಹಕರಿಸಿದರು.
ಸಭೆಗೆ ಭಾಗವಹಿಸಿದ್ದ ಎಲ್ಲಾ ಸದಸ್ಯರುಗಳಿಗೆ ಸಂಘದ ವತಿಯಿಂದ ಉಡುಗೊರೆಯನ್ನು ನೀಡಿ ಗೌರವಿಸಲಾಯಿತು.
ರಾಷ್ಟ್ರಗೀತೆಯೊಂದಿಗೆ ಸಭೆ ಮುಕ್ತಾಯಗೊಂಡಿತು.