ಸಂಸ್ಥೆಯ ಕೆಲಸ ಅಭಿನಂದನೀಯ: ವಂ| ಬಿಜು ಕೆ.ಜಿ.
ಪುತ್ತೂರು: ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿರುವ ಅಂತರಾಷ್ಟ್ರೀಯ ಖ್ಯಾತಿಯ ಚಿನ್ನಾಭರಣ ಮಳಿಗೆ ಜೋಸ್ ಆಲುಕ್ಕಾಸ್ ನ 60 ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆ ಪ್ರಯುಕ್ತ ಪಂಜಳ ಶಾಂತಿಗಿರಿ ವಿದ್ಯಾನಿಕೇತನ್ ಶಾಲೆಗೆ ಅಗತ್ಯ ಸಾಮಾಗ್ರಿ ಖರೀದಿಗೆ ಸಿ.ಎಸ್.ಆರ್. ಫಂಡ್ ನಿಂದ ಕೊಡಮಾಡಿದ ರೂ. 2,33,916 ಮೊತ್ತದ ಚೆಕ್ ಅನ್ನು ವಿತರಣೆ ಮಾಡಲಾಯಿತು.
ಚೆಕ್ ಸ್ವೀಕರಿಸಿ ಮಾತನಾಡಿದ ಪಂಜಳ ಶಾಂತಿಗಿರಿ ವಿದ್ಯಾನಿಕೇತನ್ ಶಾಲೆಯ ಸಂಚಾಲಕರಾದ ವಂ| ಬಿಜು ಕೆ.ಜಿ., ರವರು ಮಾತನಾಡಿ ಜೋಸ್ ಆಲುಕ್ಕಾಸ್ ಚಿನ್ನಾಭರಣ ಸಂಸ್ಥೆ ಮಾಡುತ್ತಿರುವ ಅತ್ಯುತ್ತಮ ಕೆಲಸ ಇದಾಗಿದೆ. ಇವರ ಈ ಸೇವೆಯನ್ನು ಮರೆಯುವಂತಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೆ ಇವರು ನೀಡಿದಂತಹ ಕೊಡುಗೆ ಬಹಳಷ್ಟು ಸಹಕಾರಿಯಾಗಿದೆ.
ಸಂಸ್ಥೆ ವ್ಯವಹಾರದೊಂದಿಗೆ ಇಂತಹ ಸಮಾಜಮುಖಿ ಕಾರ್ಯ ನಡೆಸುತ್ತಿರುವುದು ತುಂಬಾ ಸಂತಸದ ವಿಶಯವಾಗಿದೆ ಎಂದರು.
ಶಾಲಾ ಶಿಕ್ಷಕಿ ಪುನೀತಾಶಂಕರ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸಂಸ್ಥೆಯ ಏರಿಯಾ ಮ್ಯಾನೇಜರ್ ಬಿಜು ಟಿ.ಎಲ್., ಪುತ್ತೂರು ಶಾಖಾ ಮ್ಯಾನೇಜರ್ ರತೀಶ್ ಸಿ.ಪಿ., ಪಂಜಳ ಶಾಂತಿಗಿರಿ ವಿದ್ಯಾನಿಕೇತನ್ ಶಾಲೆಯ ಮುಖ್ಯೋಪಾದ್ಯಾಯರಾದ ಅಶ್ವತಿ ಅರವಿಂದ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಸಿಬ್ಬಂದಿ ರಮ್ಯ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.