ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದರ ವಿರುದ್ದ ಸುಳ್ಯದಲ್ಲಿ ಕಾಂಗ್ರೆಸ್ ಪ್ರತಿಭಟನೆ

0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ವಿರೋಧಿಸಿ ಸುಳ್ಯದಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಸುಳ್ಯದ ತಾಲೂಕು ಪಂಚಾಯತ್ ಮುಂಭಾಗದಿಂದ ನಾಯಕರು ಹಾಗೂ ಕಾರ್ಯಕರ್ತರು ಮೆರವಣಿಗೆ ಆರಂಭಿಸಿ ಖಾಸಗಿ ಬಸ್ ನಿಲ್ದಾಣದ ಬಳಿಯಲ್ಲಿ ಪ್ರತಿಭಟನಾ ಸಭೆ ನಡೆಯಿತು.


ಪ್ರತಿಭಟನಾ ಸಭೆಯಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, “ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ೧೩೬ ಸ್ಥಾನಗಳನ್ನು ಕೊಡುವ ಮೂಲಕ ಸರಕಾರ ರಚನೆಗೆ ಜನರು ಆಶೀರ್ವಾದ ಮಾಡಿದ್ದಾರೆ. ಇದನ್ನು ಬಿಜೆಪಿಗರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ಸರಕಾರವನ್ನು ಅಸ್ತಿರಗೊಳಿಸಬೇಕೆಂಬ ನಿಟ್ಟಿನಲ್ಲಿ ಬಿಜೆಪಿ ಹವಣಿಸುತ್ತಿದೆ. ಸಿದ್ಧರಾಮಯ್ಯರು ಜನಪರ ಯೋಜನೆ ನೀಡಿದ ಮುಖ್ಯಮಂತ್ರಿ ಅವರ ವಿರುದ್ಧ ಮಾತನಾಡಲು ಏನೂ ಸಿಗದಿದ್ದಾಗ ಮುಡಾ ಹಗರಣ ಎಂದು ಆರೋಪ ಮಾಡಿದರು.

ಆ ಮೂಲಕ ನಮ್ಮ ನಾಯಕ ಸಿದ್ಧರಾಮಯ್ಯರ ಹೆಸರಿಗೆ ಕಳಂಕ ತರುವ ಕೆಲಸವನ್ನು ಬಿಜೆಪಿಗರು ಮಾಡಿದರು. ಮುಡಾ ಪ್ರಕರಣ ಅದೊಂದು ಪ್ರಕರಣವೇ ಅಲ್ಲ. ಮುಖ್ಯಮಂತ್ರಿಗಳು ನೇರ ಭಾಗಿಯೇ ಆಗಿಲ್ಲ. ಅದರ ಕುರಿತು ಮೊದಲು ಬಿಜೆಪಿಯವರು ತಿಳಿದುಕೊಳ್ಳಬೇಕು. ರಾಜ್ಯಪಾಲರು ಕೂಡಾ ಈ ಕುರಿತು ಪರಾಮರ್ಶೆ ನಡೆಸದೇ ಏಕಾಏಕಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಮೂಲಕ ದ್ವೇಷದ ರಾಜಕಾರಣ ಮಾಡಲು ಹೊರಟಿರುವುದು ಖಂಡನೀಯ ಎಂದು ಹೇಳಿದರು.


ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಕೆ ಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್. ಪದ್ಮರಾಜ್ ಪೂಜಾರಿ, ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್ ಮಾತನಾಡಿದರು.
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಟಿ.ಎಂ.ಶಹೀದ್ ತೆಕ್ಕಿಲ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಭರತ್ ಮುಂಡೋಡಿ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಕಾಂಗ್ರೆಸ್ ಮುಖಂಡರಾದ ನಿತ್ಯಾನಂದ ಮುಂಡೋಡಿ, ರಾಜೀವಿ ರೈ ಎನ್.ಜಯಪ್ರಕಾಶ್ ರೈ ಪ್ರದೀಪ್ ಕುಮಾರ್ ರೈ ಪಾಂಬಾರು, ಸರಸ್ವತಿ ಕಾಮತ್, ಎಂ.ವೆಂಕಪ್ಪ ಗೌಡ, ರಾಧಾಕೃಷ್ಣ ಬೊಳ್ಳೂರು, ಶಾಹುಲ್ ಹಮೀದ್ ಕುತ್ತಮೊಟ್ಟೆ, ಡಾ.ರಘು, ಗೀತಾ ಕೋಲ್ಟಾರ್, ಬೆಟ್ಟ ರಾಜಾರಾಮ ಭಟ್, ಪಿ.ಎಸ್.ಗಂಗಾಧರ, ಇಕ್ಬಾಲ್ ಎಲಿಮಲೆ, ಸುಧೀರ್ ಕುಮಾರ್ ಶೆಟ್ಟಿ ಕಡಬ, ಇಸ್ಮಾಯಿಲ್ ಪಡ್ಡಿನಂಗಡಿ, ಶರೀಪ್ ಕಂಠಿ, ಶಾಫಿ ಕುತ್ತಮೊಟ್ಟೆ, ಸುರೇಶ್ ಎಂ.ಎಚ್, ಲಕ್ಷ್ಮೀಶ ಗಬ್ಬಲಡ್ಕ, ಕೆ.ಎಸ್.ಉಮ್ಮರ್, ಶ್ರೀಹರಿ ಕುಕ್ಕುಡೇಲು, ರಂಜಿತ್ ರೈ ಮೇನಾಲ, ಜಿ.ಕೆ.ಹಮೀದ್, ಮಹಮ್ಮದ್ ಕುಂಞ ಗೂನಡ್ಕ, ಕೆ.ಪಿ.ಜಾನಿ, ರಾಜು ಪಂಡಿತ್, ಅಶೋಕ್ ಚೂಂತಾರು, ಧರ್ಮಪಾಲ ಕೊಯಿಂಗಾಜೆ, ಮೂಸಾ ಕುಂಞ ಪೈಂಬೆಚ್ಚಾಲ್, ರಹೀಂ ಬೀಜದಕಟ್ಟೆ, ಶೌವಾದ್ ಗೂನಡ್ಕ, ವಿಜೇಶ್ ಹಿರಿಯಡ್ಕ,ರಾಜು ಪಂಡಿತ್, ಅಶೋಕ್ ಚೂಂತಾರು, ಧರ್ಮಪಾಲ ಕೊಯಿಂಗಾಜೆ, ಮೂಸಾ ಕುಂಞ ಪೈಂಬೆಚ್ಚಾಲ್, ರಹೀಂ ಬೀಜದಕಟ್ಟೆ, ಶೌವಾದ್ ಗೂನಡ್ಕ, ವಿಜೇಶ್ ಹಿರಿಯಡ್ಕ, ಕಳಂಜ ವಿಶ್ವನಾಥ ರೈ ಪ್ರವೀಣ ಮರುವಂಜ, ಸೋಮಶೇಖರ ಕೇವಳ, ಧೀರಾ ಕ್ರಾಸ್ತಾ, ಅಬ್ದುಲ್ ಗಫೂರ್ ಕಲ್ಮಡ್ಕ, ಹರೀಶ್ ಇಂಜಾಡಿ, ಹಸೈನಾರ್ ಹಾಜಿ ಗೋರಡ್ಕ, ಮಿತ್ರದೇವ ಮಡಪ್ಪಾಡಿ, ಶಹೀದ್ ಪಾರೆ, ಭವಾನಿ ಶಂಕರ ಕಲ್ಮಡ್ಕ ಎ.ಬಿ. ಇಬ್ರಾಹಿಂ ಕಲ್ಲುಗುಂಡಿ, ಅನಿಲ್ ರೈ ಸಲೀಂ ಪೆರುಂಗೋಡಿ, ಅಬ್ದುಲ್ ಮಜೀದ್ ನಡುವಡ್ಕ, ರಾಧಾಕೃಷ್ಣ ಪರಿವಾರಕಾನ, ಎ.ಬಿ.ಅಬ್ಬಾಸ್ ಅಡ್ಪಂಗಾಯ, ಕುಕ್ಕೆಟ್ಟಿ ಕುಶಾಲಪ್ಪ ಗೌಡ, ದಿನೇಶ್ ಸರಸ್ವತಿ ಮಹಲ್, ಯೂಸುಫ್ ಅಂಜಿಕಾರು, ಪ್ರಹ್ಲಾದ್ ಬಿ, ವೆಂಕಟ್ರಮಣ ಇಟ್ಟಿಗುಂಡಿ, ಮತ್ತಿತರರು ಉಪಸ್ಥಿತರಿದ್ದರು.