ಸುಳ್ಯದ ನಾಡಹಬ್ಬ ಶ್ರೀ ಶಾರದಾಂಬ ದಸರಾ – 2024

0

ಹಳೆಗೇಟು – ಶಾಂತಿನಗರ – ಬೆಟ್ಟಂಪಾಡಿ – ಕೊರಂಬಡ್ಕ ಹಾಗೂ ಕುರುಂಜಿಗುಡ್ಡೆ ವಾರ್ಡ್ ಸಮಿತಿ ರಚನೆ

ಸುಳ್ಯದ ನಾಡಹಬ್ಬ ಶ್ರೀ ಶಾರದಾಂಬ ದಸರಾ ಉತ್ಸವದ ಪ್ರಯುಕ್ತ ಸುಳ್ಯ ನಗರದ ಹಳೆಗೇಟು, ಶಾಂತಿನಗರ, ಬೆಟ್ಟಂಪಾಡಿ, ಕೊರಂಬಡ್ಕ ಹಾಗೂ ಕುರುಂಜಿಗುಡ್ಡೆ ವಾರ್ಡ್ ಸಮಿತಿಯನ್ನು ರಚಿಸಲಾಯಿತು.

ಹಳೆಗೇಟು ವಾರ್ಡ್ ಸಮಿತಿ

ಹಳೆಗೇಟು ವಾರ್ಡ್ ಸಮಿತಿ ಸಭೆಯು ಹಳೆಗೇಟಿನ ವಸಂತಕಟ್ಟೆಯಲ್ಲಿ ನಡೆಯಿತು.
ಅಧ್ಯಕ್ಷರಾಗಿ ಗೌತಮ್ ಭಟ್, ಕಾರ್ಯದರ್ಶಿಯಾಗಿ ಸಚಿನ್ ರಾವ್ ಹಳೆಗೇಟು, ಸಂಚಾಲಕರಾಗಿ ಬುದ್ಧನಾಯ್ಕ ಆಯ್ಕೆಯಾದರು. ಉಳಿದಂತೆ ವಾರ್ಡ್ ಸಮಿತಿ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.

ಶಾಂತಿನಗರ ವಾರ್ಡ್ ಸಮಿತಿ

ಶಾಂತಿನಗರ ವಾರ್ಡ್ ಸಮಿತಿಯ ಸಭೆಯು ಶಾಂತಿನಗರದ ಶ್ರೀ ಮುತ್ತಪ್ಪ ದೈವಸ್ಥಾನದ ವಠಾರದಲ್ಲಿ ಜರುಗಿತು.
ಅಧ್ಯಕ್ಷರಾಗಿ ಮಧುಸೂದನ್ ಪಿ.ಯಂ., ಕಾರ್ಯದರ್ಶಿಯಾಗಿ ನವೀನ್ ಎಸ್.ಆರ್. ಹಾಗೂ ಸಂಚಾಲಕರಾಗಿ ರಾಮಕೃಷ್ಣ ಶಾಂತಿನಗರ ಆಯ್ಕೆಯಾದರು. ವಾರ್ಡ್ ಸಮಿತಿಗೆ ಹಲವರನ್ನು ಸದಸ್ಯರುಗಳನ್ನಾಗಿ ಆಯ್ಕೆ ಮಾಡಲಾಯಿತು.

ಬೆಟ್ಟಂಪಾಡಿ ವಾರ್ಡ್ ಸಮಿತಿ

ಬೆಟ್ಟಂಪಾಡಿ ವಾರ್ಡ್ ಸಮಿತಿ ಸಭೆಯು ಬೆಟ್ಟಂಪಾಡಿಯ ಭಜನಾ ಮಂದಿರದ ವಠಾರದಲ್ಲಿ ನಡೆಯಿತು.
ಅಧ್ಯಕ್ಷರಾಗಿ ಅವಿನ್ ಬೆಟ್ಟಂಪಾಡಿ, ಕಾರ್ಯದರ್ಶಿಯಾಗಿ ವಿಶ್ವನಾಥ ಪಡ್ಡಂಬೈಲು, ಸಂಚಾಲಕರಾಗಿ ಮಲ್ಲೇಶ್ ಬೆಟ್ಟಂಪಾಡಿ ಆಯ್ಕೆಯಾದರು. ವಾರ್ಡ್ ಸಮಿತಿಗೆ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.

ಕೊರಂಬಡ್ಕ ವಾರ್ಡ್ ಸಮಿತಿ
ಕೊರಂಬಡ್ಕ ವಾರ್ಡ್ ಸಮಿತಿ ಸಭೆಯು ಕೊರಂಬಡ್ಕದ ಕೊರಗಜ್ಜ ದೈವದ ಸನ್ನಿಧಿಯಲ್ಲಿ ನಡೆಯಿತು.
ಅಧ್ಯಕ್ಷರಾಗಿ ರಮೇಶ್ ಕುದ್ಪಾಜೆ, ಕಾರ್ಯದರ್ಶಿಯಾಗಿ ಪಾರ್ವತಿ ಕೊರಂಬಡ್ಕ, ಸಂಚಾಲಕರಾಗಿ ರಮೇಶ್ ಇರಂತಮಜಲು ಆಯ್ಕೆಯಾದರು. ವಾರ್ಡ್ ನ ಹಲವರನ್ನು ಸದಸ್ಯರುಗಳನ್ನಾಗಿ ಆಯ್ಕೆ ಮಾಡಲಾಯಿತು.

ಕುರುಂಜಿಗುಡ್ಡೆ ವಾರ್ಡ್ ಸಮಿತಿ
ಕುರುಂಜಿಗುಡ್ಡೆ ವಾರ್ಡ್ ಸಭೆಯು ಬೂಡು ಶ್ರೀ ಭಗವತಿ ಸನ್ನಿಧಿಯಲ್ಲಿ ನಡೆಯಿತು.
ಅಧ್ಯಕ್ಷರಾಗಿ ಭಾಸ್ಕರರಾವ್, ಕಾರ್ಯದರ್ಶಿಯಾಗಿ ಶೀನಪ್ಪ ಬಯಂಬು, ಸಂಚಾಲಕರಾಗಿ ವಿಜಯಕುಮಾರ್ ಕುರುಂಜಿಗುಡ್ಡೆ ಆಯ್ಕೆಯಾದರು.
ಕುರುಂಜಿಗುಡ್ಡೆ ವಾರ್ಡ್ ನ ಹಲವರನ್ನು ಸಮಿತಿ ಸದಸ್ಯರುಗಳನ್ನಾಗಿ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶ್ರೀ ಶಾರದಾಂಬ ಸಮೂಹ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.