ಜಾಲ್ಸುರು ಗ್ರಾಮದ ಕಾಳಮ್ಮನೆ ದಿ. ರಾಮಣ್ಣ ಗೌಡರ ಧರ್ಮಪತ್ನಿ ಶ್ರೀಮತಿ ಪುಟ್ಟಮ್ಮರವರು ಅಲ್ಪಕಾಲದ ಅಸೌಖ್ಯದಿಂದ ಆ. 30 ರಂದು ಬೆಳಗ್ಗೆ ಸ್ವಗ್ರಹದಲ್ಲಿ ನಿಧನರಾದರು.
ಅವರಿಗೆ 76 ವರ್ಷ ವಯಸ್ಸಾಗಿತ್ತು.
ಶ್ರೀಮತಿ ಪುಟ್ಟಮ್ಮರವರು ಹಾವು ಕಡಿತಕ್ಕೆ ಒಳಗಾದವರಿಗೆ, ಹುಚ್ಚು ನಾಯಿ ಕಡಿತಕ್ಕೆ ಒಳಗಾದವರಿಗೆ ನಾಟಿ ಮದ್ದು ನೀಡುತ್ತಿದ್ದರು.
ಮೃತರು ಪುತ್ರಿಯರಾದ ಶ್ರೀಮತಿ ಪುಷ್ಪಾವತಿ, ಶ್ರೀಮತಿ ಶಶಿಕಲಾ, ಶ್ರೀಮತಿ ಶೀಲಾವತಿ, ಶ್ರೀಮತಿ ಕುಸುಮಾವತಿ, ಶ್ರೀಮತಿ ದಿವ್ಯ, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.