ಆ.31: ಪಂಜ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ರೂಪಕಲಾ ಕೆ. ಎಸ್. ರವರಿಗೆ ನಿವೃತ್ತಿ

0

ಸರಕಾರಿ ಪದವಿ ಪೂರ್ವ ಕಾಲೇಜು ಪಂಜ ಇಲ್ಲಿ ವಾಣಿಜ್ಯಶಾಸ್ತ್ರದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದ ಶ್ರೀಮತಿ ರೂಪಕಲಾ ಕೆ.ಎಸ್. ರವರು ಆ.31ರಂದು ನಿವೃತ್ತರಾಗಲಿದ್ದಾರೆ.


ಇವರು ಸ.ಹಿ. ಪ್ರಾ ಶಾಲೆ ಬಿಳಿನೆಲೆ ಕೈಕಂಬದಲ್ಲಿ ಒಂದರಿಂದ ಐದನೇ ತರಗತಿ ಶಿಕ್ಷಣವನ್ನು ಪೂರೈಸಿ ಸುಬ್ರಹ್ಮಣ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮತ್ತು ಸುಬ್ರಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದು ವಿವೇಕಾನಂದ ಕಾಲೇಜು ಪುತ್ತೂರು ಇಲ್ಲಿ ಬಿಬಿಎಂ ಪದವಿಯನ್ನು ವ್ಯಾಸಂಗ ಮಾಡಿ, ನಂತರ ಮಂಗಳೂರು ವಿಶ್ವವಿದ್ಯಾನಿಲಯದಿಂದ ಎಂ ಕಾಂ ಪದವಿ ಪಡೆದರು.


1988ರಲ್ಲಿ ಪಂಜ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರದ ಅರೆಕಾಲಿಕ ಉಪನ್ಯಾಸಕರಾಗಿ ಸೇವೆಗೆ ಸೇರಿದರು. 2014ರಲ್ಲಿ ಖಾಯಂ ಉಪನ್ಯಾಸಕರಾಗಿ ವಿಲಿನಗೊಂಡು ಸುಮಾರು 34 ವರ್ಷಗಳ ಸುಧೀರ್ಘ ಸೇವೆಯನ್ನು ಸಲ್ಲಿಸಿದ್ದಾರೆ.

ಸುಮಾರು 34 ವರ್ಷಗಳ ಉಪನ್ಯಾಸಕ ವೃತ್ತಿಯನ್ನು ಮಾಡಿದ ಇವರು ಆ.31 ರಂದು ವಯೋನಿವೃತ್ತಿಯನ್ನು ಹೊಂದಲಿದ್ದಾರೆ, ಅವರು ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಮಾಯಿತ್ತಾಲು ನವರು. ಪತಿ ವಿಶ್ವನಾಥ ನಿವೃತ್ತ ಸೇನಾನಿ ಮತ್ತು ಮಕ್ಕಳಾದ ದಿಶಾ ಮತ್ತು ದರ್ಶನ್ ಸಾಫ್ಟ್ ವೇರ್ ಇಂಜಿನಿಯರ್ ಗಳು.