ಕಲ್ಮಡ್ಕ ಗ್ರಾಮದ ಮಾಳಪ್ಪಮಕ್ಕಿ ದಿ. ಶಂಕರನಾರಾಯಣಯ್ಯನವರ ಧರ್ಮಪತ್ನಿ ಶ್ರೀಮತಿ ಪರಮೇಶ್ವರಿ ಎಂ.ಎಸ್ ಆ. 29ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಇವರಿಗೆ 83 ವರ್ಷ ವಯಸ್ಸಾಗಿತ್ತು. ಕಲ್ಮಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕಿಯಾಗಿ ಸೇವೆ ಸಲ್ಲಿಸಿರುವ ಇವರು ಪುತ್ರರಾದ ಸುಬ್ರಹ್ಮಣ್ಯ ಎಂ.ಎಸ್, ಗೋಪಾಲಕೃಷ್ಣ ಎಂ.ಎಸ್, ವೆಂಕಟ್ರಮಣ ಎಂ.ಎಸ್, ವಿಘ್ನೇಶ್ವರ ಎಂ.ಎಸ್, ಸದಾಶಿವ ಎಂ.ಎಸ್, ಪುತ್ರಿಯರಾದ ಶ್ರೀಮತಿ ಲಕ್ಷ್ಮೀ ಮಾಧವ ಬಾಪಟ್, ಶ್ರೀಮತಿ ಶಾರದಾ ರಾಮಕೃಷ್ಣ ದೀಕ್ಷಿತ್, ಸೀತೆ ರಘುರಾಮ ಭಟ್, ಶ್ರೀಮತಿ ಮೀನಾಕ್ಷಿ ಮಂಜುನಾಥಯ್ಯ, ಸೇರಿದಂತೆ ಸೊಸೆಯಂದಿರು, ಮೂವರು ಸಹೋದರರು, ಐವರು ಸಹೋದರಿಯನ್ನು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.