ಸೆ.07,08 : ಮುಕ್ಕೂರು – ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ

0

ಪೆರುವಾಜೆ ಗ್ರಾಮದ ಕುಂಡಡ್ಕ ಮುಕ್ಕೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಸಂಭ್ರಮದ ಪುಳಕ ಮೂರೈದು (ಹದಿನೈದರ ಹುತ್ತರಿ) ಕಾರ್ಯಕ್ರಮವು ಸೆ.07 ಮತ್ತು ಸೆ.08 ರಂದು ಮುಕ್ಕೂರು ವಠಾರದಲ್ಲಿ ನಡೆಯಲಿದೆ.
ಸೆ.07 ರಂದು ಬೆಳಿಗ್ಗೆ ಗಂಟೆ 9.00 ರಿಂದ ಕ್ರೀಡಾಕೂಟ ನಡೆಯಲಿದೆ.
ಕ್ರೀಡಾಕೂಟವನ್ನು ಎಂಜಿನಿಯರ್ ನರಸಿಂಹ ತೇಜಸ್ವಿ ಕಾನಾವು ದೀಪ ಬೆಳಗಿಸಿ ಉದ್ಘಾಟಿಸುವರು.


ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ತಾರಾನಾಥ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಹಲವು ಜನ ಗಣ್ಯರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಬಳಿಕ ಆಟೋಟ ಸ್ಪರ್ಧೆಗಳು ನಡೆಯಲಿದೆ.
ಸೆ.08 ರಂದು ಸಂಜೆ 6.45 ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ.


ನಳೀಲು ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ಉದ್ಘಾಟನೆ ಮಾಡಲಿದ್ದಾರೆ.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಸಭಾಧ್ಯಕ್ಷತೆ ವಹಿಸಲಿದ್ದಾರೆ.
ಸಹಕಾರ ,ಧಾರ್ಮಿಕ ,ರಂಗಭೂಮಿ ಕ್ಷೇತ್ರದ ಸೇವೆಗಾಗಿ ಕುಂಬ್ರ ದಯಾಕರ ಆಳ್ವ ಪೆರುವಾಜೆ , ಪರಿಸರ ಮಿತ್ರ ಹೊನ್ನಪ್ಪ ಗೌಡ ಚಾಮುಂಡಿಮೂಲೆ ಇವರನ್ನು ಸನ್ಮಾನಿಸಲಾಗುವುದು.
ಎಣ್ಮೂರು ಪ್ರೌಢಶಾಲೆ ಆಂಗ್ಲಭಾಷಾ ಶಿಕ್ಷಕ ಲಿಂಗಪ್ಪ ಬೆಳ್ಳಾರೆ ಅಭಿನಂದನಾ ಮಾತು ಆಡಲಿದ್ದಾರೆ.
ಹಲವು ಜನ ಗಣ್ಯರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಸೆ.08 ರಂದು ಸಂಜೆ ಗಂಟೆ 5.00 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಕುಣಿತ ಭಜನೆ,ಸಾಂಸ್ಕೃತಿಕ ವೈಭವ,ಭರತ ನಾಟ್ಯ ನಡೆಯಲಿದೆ.
ಬಾಲಕೃಷ್ಣ ನೆಟ್ಟಾರು ಮತ್ತು ಬಳಗ ಅರ್ಪಿಸುವ ‘ಗಾನ ಸಂಭ್ರಮ’ ಮೆಲೋಡಿಸ್ ಪ್ರಸ್ತುತ ಪಡಿಸುವ ‘ಸಂಗೀತ ರಸಮಂಜರಿ’ ನಡೆಯಲಿದೆ.