ಕಲ್ಲೇರಿ : ಶ್ರೀ ಕೃಷ್ಣ ಜನ್ಮಾಷ್ಟಮಿ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

0

ಎಣ್ಮೂರು ಗ್ರಾಮದ ಕಲ್ಲೇರಿಯ ೨೦ ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕೋಡಿಕೆ ಉತ್ಸವ ಮತ್ತು ಸಾಂಸ್ಕೃತಿಕ ಹಾಗೂ ಆಟೋಟ ಸ್ಪರ್ಧೆಗಳು ಆ.೩೧ ರಂದು ಶ್ರೀ ಗಣೇಶ್ ಫ್ರೆಂಡ್ ಸರ್ಕಲ್ ಮತ್ತು ಶ್ರೀ ಗೌರಿ ಯುವತಿ ಮಂಡಲ ಇದರ ಆಶ್ರಯದಲ್ಲಿ ನಡೆಯಿತು.


ಸ್ಥಳ ಸಾನಿಧ್ಯ ಕಲ್ಲೇರಿ ಗುಳಿಗನ ಕಟ್ಟೆಯಲ್ಲಿ ಪ್ರಾರ್ಥನೆಯ ಬಳಿಕ, ಸ್ಥಾಪಕ ಸದಸ್ಯ, ಕೃಷಿಕ ಬಾಬು ಬೆಳ್ಚಪ ಕಲ್ಲೇರಿ ದೀಪ ಬೆಳಗಿಸಿದರು. ಪಡ್ಪಿನಂಗಡಿ ಹಾಲು ಉತ್ಪಾದಕರ ಸಹಕಾರ ಸಂಘ ಉಪಾಧ್ಯಕ್ಷ ಹಾಗೂ ಹೈನುಗಾರ ಪ್ರಶಸ್ತಿ ಪುರಸ್ಕೃತ ಚಾಮೆತ್ತಡ್ಕ ಶಿವರಾಮ ಮಡಿವಾಳ ಭಗವಧ್ವಜಾರೋಹಣಗೈದು, ಸಭಾ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಸಂಘದ ಅಧ್ಯಕ್ಷ ಸುರೇಶ್ ರೈ ಕಲ್ಲೇರಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು. ಎಡಮಂಗಲ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ದಿವ್ಯಾಯೋಗಾನಂದ, ಸದಸ್ಯ ಮಾಯಿಲಪ್ಪ ಗೌಡ, ಎಣ್ಮೂರು ಧ.ಗ್ರಾ. ಯೋಜನೆ ವಲಯಾಧ್ಯಕ್ಷ ವಸಂತ ಕುಕ್ಕಾಯಕೋಡಿ, ಎಡಮಂಗಲ ಪಂಚಾಯತ್ ಸದಸ್ಯೆ ಶ್ರೀಮತಿ ಸವಿತಾ ಕಲ್ಲೇರಿ ಶುಭ ಹಾರೈಸಿದರು. ಸಂಘದ ಕಾರ್ಯದರ್ಶಿ ಹರಿಪ್ರಸಾದ್ ಅಲೆಂಗಾರ ವೇದಿಕೆಯಲ್ಲಿದ್ದರು.
ರೋಹಿಣಿ ಕಲ್ಲೇರಿ ಪ್ರಾರ್ಥಿಸಿದರು. ಸದಸ್ಯ ಕಾರ್ತಿಕ್ ರೈ ಕಲ್ಲೇರಿ ಸ್ವಾಗತಿಸಿದರು. ಗೌರಿ ಯುವತಿ ಮಂಡಲ ಅಧ್ಯಕ್ಷೆ ಶ್ರೀಮತಿ ಶೋಭಾ ಎಸ್ . ರೈ ವಂದಿಸಿದರು. ಎಣ್ಮೂರು ಪ್ರದೀಪ್ ರೈ ಕಾರ್ಯಕ್ರಮ ನಿರೂಪಿಸಿದರು.