ಸಂಪಾಜೆ ಆರ್.ಎಂ.ಎಸ್. ಪ್ರೌಢಶಾಲೆಗೆ ದ.ಕ. ಜಿ.ಪಂ. ಉಪಕಾರ್ಯದರ್ಶಿ ಎಂ.ಪಿ. ಜ್ಞಾನೇಶ್ ಭೇಟಿ

0

ದ.ಕ. ಸಂಪಾಜೆ ಗ್ರಾಮದ ಕಲ್ಲುಗುಂಡಿ ಆರ್.ಎಂ.ಎಸ್. ಪ್ರೌಢಶಾಲೆಗೆ ದ.ಕ. ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಂ.ಪಿ.ಜ್ಯಾನೇಶ್ ರವರು ಆ.31ರಂದು ಭೇಟಿ ನೀಡಿದರು.

ಶಾಲೆಯ ಬಿಸಿಯೂಟ ಕೇಂದ್ರಕ್ಕೆ ಭೇಟಿ ನೀಡಿದ ಅವರು ಮಕ್ಕಳ ಜೊತೆಗೆ ಬಿಸಿಯೂಟದಲ್ಲಿ ತರಕಾರಿಯಲ್ಲಿ ಅರೋಗ್ಯಕ್ಕೆ ಪೂರಕವಾದ ಯಾವ ಅಂಶಗಳಿವೆ ಎಂಬ ಪ್ರಶ್ನೆ ಕೇಳಿದರಲ್ಲದೇ, ಶಾಲಾ ಮಕ್ಕಳ ಪೌಷ್ಟಿಕ ಆಹಾರ, ಬಿಸಿಯೂಟದ ಪ್ರಗತಿ ಪರಿಶೀಲನೆ ಮಾಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಸುಮತಿ ಶಕ್ತಿವೇಲು, ಉಪಾಧ್ಯಕ್ಷ ಎಸ್.ಕೆ. ಹನೀಫ್, ಮಾಜಿ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ, ಜಿಲ್ಲಾ ಪಂಚಾಯತ್ ಇಂಜಿನಿಯರ್ ಮಣಿಕಂಠ, ಪಂಚಾಯತ್ ಅಭಿವೃದ್ಧಿ ಅದಿಕಾರಿ ಸರಿತಾ ಡಿಸೋಜಾ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಹನೀಫ್ ಚಟ್ಟೆಕಲ್ಲು, ಮುಖ್ಯೋಪಾಧ್ಯಾಯರು ಹಾಗೂ ಸಹ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.