ಸುಳ್ಯ ಪೇಟೆಯ ರಸ್ತೆ ಬದಿ ಬಿದ್ದು ಸಿಕ್ಕಿದ ಬೆಲೆಬಾಳುವ ಮೊಬೈಲ್ ಫೋನನ್ನು ವಾರಿಸುದಾರರಿಗೆ ಹಿಂತಿರುಗಿಸಿ ಆಟೋ ಚಾಲಕ ಪ್ರಾಮಾಣಿಕತೆ ಯನ್ನು ಮೆರೆದಿದ್ದಾರೆ.
ಲಿಖಿನ್ ಅರಂತೋಡು ಎಂಬವರ Vivo Y21 ಮೊಬೈಲ್ ಫೋನ್ ಕಟ್ಟೆ ಜಂಕ್ಷನ್ ಬಳಿ ಬಿದ್ದು ಹೋಗಿತ್ತು.
ರಿಕ್ಷಾ ಚಾಲಕರಾದ ಅನಿಲ್ ಕುಮಾರ್ ಕಲ್ಲುಮುಟ್ಲು ಎಂಬವರಿಗೆ ಫೋನ್ ಸಿಕ್ಕಿದ್ದು ಅದನ್ನು ಪ್ರಾಮಾಣಿಕತೆಯಿಂದ ಠಾಣೆಗೆ ತಂದು ನೀಡಿ ವಾರಿಸುದಾರರಿಗೆ ಮರಳಿಸಿದ್ದಾರೆ.
ಇವರ ಪ್ರಾಮಾಣಿಕತೆಯನ್ನು ಸುಳ್ಯ ಪೊಲೀಸರು ಶ್ಲಾಗಿಸಿದ್ದಾರೆ.