ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ

0

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಸೋಣ ಶನಿವಾರದ ಪ್ರಯುಕ್ತ ಶ್ರೀ ಶಾಸ್ತಾವು ಯಕ್ಷ ಪ್ರಿಯರ ಬಳಗದ ಪ್ರಾಯೋಜಕತ್ವದಲ್ಲಿ ಜಾಂಭವತಿ ಕಲ್ಯಾಣ ಯಕ್ಷಗಾನ ತಾಳಮದ್ದಳೆ ಆ.31ರಂದು ಜರುಗಿತು.

ಶ್ರೀ ಶಾಸ್ತಾವು ದೇವರ ಸನ್ನಿಧಿಯಲ್ಲಿ ಸೋಣ ಶನಿವಾರ ಪ್ರಯುಕ್ತ ಬಲಿವಾಡುಕೂಟ ಕೂಟವು ನಡೆಯಿತು.
ದೇವಸ್ಥಾನದ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀಮತಿ ಭವ್ಯ ಕುದ್ಕುಂದ, ಚೆಂಡೆ ವಿಭಾಗದಲ್ಲಿ ಸುಬ್ರಹ್ಮಣ್ಯ ವಳಕುಂಜ, ಮದ್ದಳೆಯಲ್ಲಿ ಪ್ರಣಮ್ ರಾವ್ ಮರ್ಕಂಜ, ಚಕ್ರತಾಳ ವಿಭಾಗದಲ್ಲಿ ಗಿರೀಶ್ ಕಕ್ಕೆಬೆಟ್ಟು, ಪಾತ್ರವರ್ಗದಲ್ಲಿ ಬಲರಾಮನಾಗಿ ಗಣೇಶ್ ಪಾಲೆಚ್ಚಾರ್, ಶ್ರೀಕೃಷ್ಣನಾಗಿ ಗೋಪಾಲಕೃಷ್ಣ ಅನಂತಾಡಿ, ಜಾಂಬವನಾಗಿ ಜಬ್ಬಾರ್ ಸಮೋ ಸಂಪಾಜೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಯಕ್ಷ ಬಳಗದ ಅಧ್ಯಕ್ಷ ಯೋಗೀಶ್ ಕುಂಬಳಚೇರಿ, ದೇವಸ್ಥಾನದ ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮೆಚೂರು, ಮಾಜಿ ಮೊಕ್ತೇಸರ ಪದ್ಮಯ್ಯ ಮಾಸ್ತರ್ ಕುಂದಲ್ಪಾಡಿ, ಲೋಕನಾಥ ಅಮೆಚೂರು, ಹಿರಿಯ ಯಕ್ಷಗಾನ ಪಾತ್ರಧಾರಿ ಕೆ.ಡಿ. ಕುಶಾಲಪ್ಪ ಗೌಡ, ದೇವಸ್ಥಾನದ ದೇವತಕ್ಕರು, ತಕ್ಕಮುಖ್ಯಸ್ಥರುಗಳು, ಆಡಳಿತ ಸಮಿತಿಯ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶೋಕ್ ಪೀಚೆಮನೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.