ಶ್ರೀ ಗಣೇಶ್ ಪ್ರೆಂಡ್ಸ್ ಸರ್ಕಲ್ ಶ್ರೀ ಗೌರಿ ಯುವತಿ ಮಂಡಲ ಕಲ್ಲೇರಿ ಎಣ್ಮೂರು ಇದರ ಆಶ್ರಯದಲ್ಲಿ ಆ 13ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಟೋಟ ಸ್ಪರ್ಧೆಗಳು ನಡೆಯಿತು.
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಎಡಮಂಗಲ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಣ್ಣ ಜಾಲ್ತರು ಅಧ್ಯಕ್ಷತೆ ವಹಿಸಿದ್ದರು. ಕಾರ್ಕಳ ಖ್ಯಾತ ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಧಾರ್ಮಿಕ ಉಪನ್ಯಾಸ ನೀಡಿದರು, ಮುಖ್ಯ ಅತಿಥಿಗಳಾಗಿ ಮಂಗಳೂರು ನೆಹರು ಯುವ ಕೇಂದ್ರದ ಯುವ ಅಧಿಕಾರಿ, ಜಗದೀಶ್. ಎನ್, ಕಡಬ ತಾಲೂಕ್ ಯುವಜನ ಒಕ್ಕೂಟದ ಅಧ್ಯಕ್ಷ ಶಿವಪ್ರಸಾದ್ ಮೈಲೇರಿ ; ಸುಳ್ಯ ವಕೀಲರ ಸಂಘದ ಉಪಾಧ್ಯಕ್ಷ ದಿಲೀಪ್ ಬಾಬ್ಲೂ ಬೆಟ್ಟು, ಶ್ರೀ ಗಣೇಶ್ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಸುರೇಶ್ ರೈ ಕಲ್ಲೇರಿ, ಕಾರ್ಯದರ್ಶಿ ಹರಿಪ್ರಸಾದ್ ಅಲೆಂಗಾರ, ಶ್ರೀ ಗೌರಿ ಯುವಕ ಮಂಡಲದ ಅಧ್ಯಕ್ಷೆ ಶ್ರೀ ಮತಿ ಶೀಭ ರೈ ಚಾಮೇತಡ್ಕ, ಕಾರ್ಯದರ್ಶಿಯಾಗಿ ಶ್ರೀಮತಿ ಸವಿತಾ ಕಲ್ಲೇರೀ ಯವರು ಉಪಸ್ಥಿತರಿದ್ದು, ನಿವೃತ್ತ ಸೈನಿಕರದ ಕಡೀರ ಗಿರಿಧರ ಗೌಡ ಮತ್ತು ಪ್ರಗತಿಪರ ಕೃಷಿಕರಾದ ಮೋನಪ್ಪ ಗೌಡ ಅಲೆಂಗಾರ ರವನ್ನು ಸನ್ಮಾನಿಸಿದೆ ಬಳಿಕ ನಿಂತಿಕಲ್ಲು ವಿದ್ಯಾಸಂಸ್ಥೆ ಯ 10 ನೇ ತರಗತಿಯಲ್ಲಿ601 ಮಾರ್ಕ್ ಪಡೆದ ಕು.ನೇಹಾ ಮತ್ತು ಎಣ್ಮೂರು ಪ್ರೌ ಡ ದೀಪಕ್ ರವರನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು.
ನೂತನವಾಗಿ ರಚನೆ ಗೊಂಡ ಶ್ರಿ ಗೌರಿ ಯುವತಿ ಮಂಡಲ ದ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಮುಕ್ತ ಎಣ್ಣೆ ಕಂಬ ಏರುವುದು, ಕಬ್ಬಡಿ ಹಿರಿಯರಿಗೆ, ಕಿರಿಯರಿಗೆ, ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕ ಹಗ್ಗ ಜಗ್ಗಾಟ, ವಿವಿಧ ಆಟೋಟ ಸ್ಪರ್ಧೆ, ಅಂಗನವಾಡಿ, ಒಂದನೆ ತರಗತಿ ಪುಟಾಣಿಗಳಿಗೆ ಕೃಷ್ಣ ವೇಷ ಸ್ಪರ್ಧೆ, ಮೊಸರು ಕುಡಿಕೆ ಉತ್ಸವ ಎಲ್ಲ ಸ್ಪರ್ಧೆಗಳಿಗೆ ಬಹುಮಾನ ನೀಡಿ ಪ್ರೋತ್ಸಹಿಸಲಾಯಿತು. ಮದ್ಯಾಹ್ನ ರಾತ್ರಿ ಅನ್ನ ಪ್ರಸಾದ ಭೋಜನ ಸಂಘದ ವತಿಯಿಂದ ನಡೆಯಿತು. ಕು. ಅನ್ವಿತ ತಂಡ ಪ್ರಾರ್ಥಿಸಿದರು, ಶ್ರೀಮತಿ ಶ್ರೀ ಶೀಭ ರೈ ಸ್ವಾಗತಿಸಿದರು, ಕಾರ್ತಿಕ್ ರೈ ವಂದಿಸಿದರು. ಎಣ್ಮೂರು ಪ್ರದೀಪ್ ರೈ ಕಾರ್ಯಕ್ರಮ ನಿರೂಪಿಸಿದರು. ಗೆಜ್ಜೆದ ಪೂಜೆ ಎಂಬ ತುಳು ಯಕ್ಷಗಾನ ಬಯಲಾಟ ನಡೆಯಿತು.