ಸೆ. 7 ರಿಂದ 9 : ಹಳೆಗೇಟು ಸಾಂಸ್ಕೃತಿಕ ಸಂಘದ ವತಿಯಿಂದ 41 ನೇ ವರ್ಷದ ಶ್ರೀ ಗಣೇಶೋತ್ಸವ

0

ಹಳೆಗೇಟು ಸಾಂಸ್ಕೃತಿಕ ಸಂಘದ ವತಿಯಿಂದ ಸೆ. 7,8,9 ದಿನಾಂಕಗಳಲ್ಲಿ 41 ನೇ ವರ್ಷದ ಶ್ರೀ ಗಣೇಶೋತ್ಸವ ಧಾರ್ಮಿಕ, ವೈದಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಡೆಯಲಿದೆ.

ಆ 7 ರಂದು ಬೆಳಿಗ್ಗೆ 7-00ಕ್ಕೆ ಸ್ಥಳ ಶುದ್ದಿ, ಗಣಪತಿ ಹೋಮ ನಡೆಯಲಿದ್ದು 8-00ಕ್ಕೆ : ವಿಗ್ರಹ ಪ್ರತಿಷ್ಠಾಪನೆ ಗೊಳ್ಳಲಿದೆ. ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ,ಸಂಜೆ ಗಂಟೆ 6ಕ್ಕೆ ದೀಪಾಂಜಲಿ ಮಹಿಳಾ ಭಜನಾ ಮಂಡಳಿ ಶಾಂತಿನಗರ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು,ರಾತ್ರಿ 7 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಶ್ರೀಮತಿ ಸವಿತಾ ಕಿರಣ ಇವರ ಸಾರಥ್ಯದಲ್ಲಿ ನೃತ್ಯ ವೈವಿಧ್ಯ ಕಾರ್ಯಕ್ರಮ ಹಾಗೂ ಬೆಟ್ಟಂಪಾಡಿ ಕಲಾವಿದರಿಂದ ಚಿಣ್ಣರ ಕಲರವದ ಮೆರಗು ನಡೆಯಲಿದೆ.

ಆ 8 ಬೆಳಿಗ್ಗೆ 8 ಕ್ಕೆ ಪೂಜೆ ಮಧ್ಯಾನ 1 ಗಂಟೆಗೆ ಮಹಾಪೂಜೆ, ಸಂಜೆ ಗಂಟೆ 6 ರಿಂದ ಗಜಾನನ ಭಜನಾ ಸಂಘ ಜಯನಗರ ಇವರಿಂದ ಭಜನಾ ಕಾರ್ಯಕ್ರಮ, ರಾತ್ರಿ 7-30ಕ್ಕೆ ಸಂಗೀತ ರಸಮಂಜರಿ – ಸೌಂಡ್ ಆಫ್ ಮೆಲೋಡಿ-ದಕ್ಷಿಣ ಕನ್ನಡದ ಆಯ್ದ ನುರಿತ ಕಲಾವಿದರಿಂದ ಭಕ್ತಿ ಭಾವ ಹಾಗೂ ಚಿತ್ರಗೀತೆಗಳ ಸಂಗಮ ನಡೆಯಲಿದೆ.ರಾತ್ರಿ ಗಂಟೆ 10-00ಕ್ಕೆ ಮಹಾಪೂಜೆ ನಡೆಯಲಿದೆ.

ಆ 9 ರಂದು ಬೆಳಿಗ್ಗೆ ಗಂಟೆ 8-00ಕ್ಕೆ : ಪೂಜೆ, ಅ.ಗಂಟೆ 12-30ಕ್ಕೆ ಮಹಾಪೂಜೆ, ಅ.ಗಂಟೆ 1-00ಕ್ಕೆ : ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದ್ದು ಸಂಜೆ ಗಂಟೆ 5 ರಿಂದ ವೈಭವದ ಶೋಭಾಯಾತ್ರೆ ನಡೆಯಲಿದ್ದು, ಹಳೆಗೇಟು, ಶ್ರೀರಾಂಪೇಟೆ, ಶ್ರೀ ಚೆನ್ನಕೇಶವ ದೇವಸ್ಥಾನ, ವಿವೇಕಾನಂದ ಸರ್ಕಲ್, ಜಿ.ಸ.ರಸ್ತೆ, ವಾಪಸ್ಸು ಮಿಲಿಟ್ರಿ ಗೌಂಡ್ ನಂತರ ಬ್ರಹ್ಮರಗಯದ ಬಳಿ ಜಲಸ್ತಂಭನಗೊಳ್ಳಲಿದೆ ಎಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.