ಕೊಡಗು ವಿಶ್ವವಿದ್ಯಾಲಯದ (ಮೌಲ್ಯಮಾಪನ) ನೂತನ ಕುಲಸಚಿವರಾಗಿ ಪ್ರೊ|| ಸುರೇಶ್ ಆಲೆಟ್ಟಿ ಆ. 24ರಂದು ಅಧಿಕಾರ
ಸ್ವೀಕರಿಸಿದರು.
ಈ ಸಂದರ್ಭ ಎಫ್.ಎಂ.ಕೆ.ಎಂ.ಸಿ. ಪ್ರಾಂಶುಪಾಲರಾದ ಡಾ.
ರಾಘವನ್, ಸಹಾಯಕ ಪ್ರಾಧ್ಯಾಪಕರಾದ ರವಿಶಂಕರ್ ಎಂ.ಎನ್, ಡಾ. ತಿಪ್ಪೇಸ್ವಾಮಿ, ಡಾ ನಾಗರಾಜ್, ಕೆ.ಟಿ ಡಾ. ಎಂ.ಪಿ. ಕೃಷ್ಣ, ಡಾ. ಅರುಣ್ ಸೇರಿದಂತೆ ಬೋಧಕ ಮತ್ತು
ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ನಿರ್ಗಮಿತ ಕುಲಸಚಿವರಾದ ಡಾ. ಸೀನಪ್ಪ ನೂತನ ಕುಲ ಸಚಿವರಿಗೆ
ಅಧಿಕಾರ ಹಸ್ತಾಂತರ ಮಾಡಿದರು. ಪ್ರೊ. ಸುರೇಶ್ ಆಲೆಟ್ಟಿಯವರು ಮೂಲತಃ ಆಲೆಟ್ಟಿ ಗ್ರಾಮದ ಜೆ.ಎನ್. ನಿಲಯ ದಿ. ನಾರಾಯಣ ನಾಯ್ಕ್ ಮತ್ತು ಶ್ರೀಮತಿ ಜಾನಕಿ ದಂಪತಿಯ ಪುತ್ರ. ಇವರ ಪತ್ನಿ ಡಾ. ತಾರಾವತಿ ಎನ್.ಸಿ ಮಂಗಳೂರು ವಿಶ್ವವಿದ್ಯಾನಿಲಯದ ಬಯೋಸೈನ್ಸ್ ವಿಭಾಗದ ಚಯರ್ ಪರ್ಸನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಪುತ್ರರಾದ ರಂಜಿತ್ ಮತ್ತು ರಕ್ಷಿತ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದಾರೆ.