ಆಲೆಟ್ಟಿ ಗ್ರಾಮದ ಪಾಲಡ್ಕದ ಕಾಚ್ಯಡ್ಕ ನಿವಾಸಿ ಕೊರಗಪ್ಪ ಗೌಡ ರವರು ಅಲ್ಪ ಕಾಲದ ಅಸೌಖ್ಯದಿಂದ ತನ್ನ ಸ್ವಗೃಹದಲ್ಲಿ ಆ.31 ರಂದು ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶ್ರೀಮತಿ ದೇವಮ್ಮ, ಓರ್ವ ಪುತ್ರ ದೀಕ್ಷಿತ್ ಕಾಚ್ಯಡ್ಕ, ಸೊಸೆ ಶ್ರೀಮತಿ ಅನುಷಾ, ಸಹೋದರ ಹಾಗೂ ಸಹೋದರಿಯರನ್ನು, ಮೊಮ್ಮಗ ಹಾಗೂ ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.