ಸುಳ್ಯ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ : ಸುಳ್ಯ ರೋಟರಿ ಆಂಗ್ಲ ಮಾಧ್ಯಮ ಹಿ. ಪ್ರಾ. ಶಾಲೆಗೆ ಕಿರಿಯ ಮತ್ತು ಹಿರಿಯ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ

0

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ, ಕ್ಷೇತ್ರ ಸಂಪನ್ಮೂಲ ಕೇಂದ್ರ ಸುಳ್ಯ, ಸಮೂಹ ಸಂಪನ್ಮೂಲ ಕೇಂದ್ರ ಸುಳ್ಯ, ಸೈನ್ಟ್ ಬ್ರಿಜಿಡ್ಸ್ ಅನುದಾನಿತ ಹಿ. ಪ್ರಾ. ಶಾಲೆ ಸುಳ್ಯ ಇದರ ಆಶ್ರಯದಲ್ಲಿ ಆ. ೨೯ರಂದು ಸುಳ್ಯದ ಸೈನ್ಟ್ ಬ್ರಿಜಿಡ್ಸ್ ಅನುದಾನಿತ ಹಿ. ಪ್ರಾ. ಶಾಲೆಯಲ್ಲಿ ಸುಳ್ಯ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ನಡೆಯಿತು. ಪ್ರಾಥಮಿಕ ವಿಭಾಗ(೧ ರಿಂದ ೪ನೇ ತರಗತಿ)ದಲ್ಲಿ ಒಟ್ಟು ೧೨ ಸ್ಪರ್ಧಾ ವಿಷಯಗಳು ಇದ್ದವು.೧೨ ಶಾಲೆಗಳು ಈ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದವು. ರೋಟರಿ ಕ್ಲಬ್ ಸುಳ್ಯ ನಡೆಸಲ್ಪಡುವ, ರೋಟರಿ ಚಾರಿಟೇಬಲ್ ಟ್ರಸ್ಟ್ ಸುಳ್ಯ(ರಿ.)ಇದರ ಆಡಳಿತಕ್ಕೆ ಒಳ ಪಟ್ಟ ಪ್ರತಿಷ್ಠಿತ ಸುಳ್ಯ ರೋಟರಿ ಆಂಗ್ಲ ಮಾಧ್ಯಮ ಹಿ. ಪ್ರಾ. ಶಾಲೆ, ಶಾಲಾ ಹಂತದ ಪ್ರತಿಭಾ ಕಾರಂಜಿ ಸ್ಪರ್ಧೆ ನಡೆಸಿ ಆಯ್ಕೆ ಆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸುಳ್ಯ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿತು. ಈ ಶಾಲೆ ಪ್ರಾಥಮಿಕ ವಿಭಾಗ(೧ರಿಂದ ೪ನೇ ತರಗತಿ)ದಲ್ಲಿ ೪ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿ ತಾಲ್ಲೂಕು ಮಟ್ಟದ ಸ್ಪರ್ಧೆಗಳಿಗೆ ಆಯ್ಕೆ ಆಗಿರುತ್ತದೆ. ಅದಲ್ಲದೇ ೪ ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ, ೧ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿ ೩೩ ಅಂಕಗಳೊಂದಿಗೆ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.









    
 ಫಲಿತಾಂಶ ವಿವರ: ಕಿರಿಯ ವಿಭಾಗ(1ರಿಂದ 4ನೇ ತರಗತಿ)-ಭಕ್ತಿಗೀತೆ:ಪ್ರಥಮ(ಆರ್ವಿ ಎಂ. -4ನೇ),ಅಭಿನಯ ಗೀತೆ :ಪ್ರಥಮ(ಪ್ರಾಪ್ತಿ ಎ. ಆರ್.-4ನೇ), ಕ್ಲೇ ಮಾಡೆಲ್ಲಿಂಗ್ :ಪ್ರಥಮ(ಹವೀಶ್ ಕೆ. ಆರ್.- 4ನೇ), ಚಿತ್ರಕಲೆ:ಪ್ರಥಮ (ಅನಿಸಿಕಾ -4ನೇ), ಇಂಗ್ಲಿಷ್ ಕಂಠಪಾಠ:ದ್ವಿತೀಯ(ರೀಹಾ ಫಾತಿಮಾ-4ನೇ), ದೇಶಭಕ್ತಿಗೀತೆ:ದ್ವಿತೀಯ(ಮೌರ್ಯ ನಾರ್ಕೋಡು-4ನೇ), ಆಶು ಭಾಷಣ :ದ್ವಿತೀಯ(ಪ್ರಾಪ್ತಿ ಎ. ಆರ್.-4ನೇ), ಕತೆ ಹೇಳುವುದು-ದ್ವಿತೀಯ(ಮೌರ್ಯ ನಾರ್ಕೋಡು-4ನೇ), ಸಂಸ್ಕೃತ ಧಾರ್ಮಿಕ ಪಠಣ:ತೃತೀಯ(ಪೂರ್ಣಚಂದ್ರ ಕೆ.-4ನೇ). ಇದೇ ಸಂಸ್ಥೆ ಹಿರಿಯ ವಿಭಾಗ(5ರಿಂದ 7ನೇ)ದಲ್ಲಿ 8 ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿ, ತಾಲ್ಲೂಕು ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗಿರುತ್ತದೆ. ಅದಲ್ಲದೇ 4 ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ, 2 ಸ್ಪರ್ಧೆಗಳಲ್ಲಿ ತೃತೀಯ ಸ್ಥಾನ ಗಳಿಸಿ 54 ಅಂಕಗಳೊಂದಿಗೆ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಹಿರಿಯ ವಿಭಾಗ(5ರಿಂದ 7ನೇ ತರಗತಿ)-ಕನ್ನಡ ಕಂಠಪಾಠ: ಪ್ರಥಮ (ಲಿಖಿತಾ ಎಂ. ಎಸ್.-7ನೇ), ಆಶು ಭಾಷಣ:ಪ್ರಥಮ(ಲೇಖನಿ ಬಿ. ಎನ್.-7ನೇ), ಅಭಿನಯ ಗೀತೆ:ಪ್ರಥಮ(ಮನಸ್ವಿ ಪಿ. ಎಂ.-5ನೇ), ಕವನ ವಾಚನ:ಪ್ರಥಮ(ಹಂಶಿಕಾ ಕೆ. ಎಸ್.-7ನೇ), ಸಂಸ್ಕೃತ ಧಾರ್ಮಿಕ ಪಠಣ:ಪ್ರಥಮ(ಸಾಧನ ಕೆ. ಎಸ್.-5ನೇ), ಭಕ್ತಿಗೀತೆ:ಪ್ರಥಮ(ಸ್ವಸ್ತಿ ಪಿ.-5ನೇ), ಚಿತ್ರಕಲೆ:ಪ್ರಥಮ(ಶ್ರೀತನ್ ಪಿ.-7ನೇ), ಕ್ಲೇ ಮಾಡೆಲ್ಲಿಂಗ್:ಪ್ರಥಮ(ಶ್ರೀತನ್ ಪಿ.-7ನೇ), ಕನ್ನಡ ಪ್ರಬಂಧ ರಚನೆ:ದ್ವಿತೀಯ(ಸಾನ್ವಿ ಕೆ. ಡಿ.-6ನೇ), ಹಿಂದಿ ಕಂಠ ಪಾಠ:ದ್ವಿತೀಯ(ಸಾನ್ವಿ  ಎಸ್.-7ನೇ), ಇಂಗ್ಲಿಷ್ ಕಂಠಪಾಠ:ದ್ವಿತೀಯ(ಮೊಹಮ್ಮದ್ ಅನಾಸ್-7ನೇ), ದೇಶ ಭಕ್ತಿಗೀತೆ:ದ್ವಿತೀಯ(ಸ್ವಸ್ತಿ ಪಿ.-5ನೇ), ಮಿಮಿಕ್ರಿ:ತೃತೀಯ(ಹಾರ್ಧಿಕ್ ರಾಜ್ ಕೆ. ಆರ್. 5ನೇ), ಕತೆ ಹೇಳುವುದು:ತೃತೀಯ (ಲಿಖಿತಾ ಎಂ. ಎಸ್. 7ನೇ)   ಬಹುಮಾನ ಲಭಿಸಿದೆ.