ಪೈಚಾರು ಸಮೀಪ ಸೆ.1ರಂದು ಮಧ್ಯಾಹ್ನ ಬೈಕ್ ಮತ್ತು ಸ್ಕೂಟಿ ನಡುವೆ ಅಪಘಾತ ಸಂಭವಿಸಿತ್ತು.
ಈ ಘಟನೆಯಲ್ಲಿ ಬೈಕಿನಲ್ಲಿ ಸಹ ಸವಾರರಾಗಿದ್ದ ಮಹಿಳೆ ರಸ್ತೆಗೆ ಬಿದ್ದಿದ್ದು ಕೂಡಲೆ ಸ್ಥಳೀಯರು ಅವರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಳಿಕ ಹೆಚ್ಚಿನ ಚಿಕಿತ್ಸೆಗೆ ಅವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದಿದ್ದು ಆದರೆ ಚಿಕಿತ್ಸೆ ಫಕಾರಿಯಾಗದೆ ಅದೇ ದಿನ ಸಂಜೆ ಸುಮಾರು ಆರು ಗಂಟೆಯ ವೇಳೆಗೆ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಮೃತ ಮಹಿಳೆ ಉತ್ತರ ಕರ್ನಾಟಕ ಮೂಲದ ಯಲಬುರ್ಗಿ ತಾಲೂಕಿನ ಚಿಕ್ಕ ಬನ್ನಿಗೋಳ ಗ್ರಾಮದ ಫಿರಾಬಿ ಎಂಬವರಾಗಿದ್ದಾರೆ.
ಅವರು ಸುಳ್ಯದಲ್ಲಿ ಕಳೆದ ಹಲವಾರು ವರ್ಷಗಳಿಂದ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಸೆ.1ರಂದು ಮಧ್ಯಾಹ್ನ ಕೆಲಸದ ನಿಮಿತ್ತ ಎಲ್ಲಪ್ಪ ಎಂಬುವವರ ಜೊತೆ ಪೈಚಾರು ಕಡೆ ಹೋಗುತ್ತಿದ್ದ ಸಂದರ್ಭದಲ್ಲಿ ಪೈಚಾರು ರಸ್ತೆಯ ಬದಿಯಲ್ಲಿದ್ದ ಸ್ಕೂಟಿ ವಾಹನ ಸವಾರ ಸುಳ್ಯದತ್ತ ಬರಲು ವಾಹನ ತಿರಿಗಿಸಿದಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಸ್ಕೂಟಿ ಸವಾರ ಹಳೆಗೇಟು ಮೂಲದ ಯುವಕ ಎನ್ನಲಾಗಿದೆ.
ಈ ಘಟನೆಯಲ್ಲಿ ಎರಡು ವಾಹನಗಳಲ್ಲಿ ಇದ್ದ ಉಳಿದ ಮೂವರಿಗೆ ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ ಎನ್ನಲಾಗಿದೆ. ಘಟನೆಯ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿಸಿದ್ದಾರೆ.