ಆಧುನಿಕ ಕೃಷಿ ಮತ್ತು ರೋಗಗಳ ಸಮಗ್ರ ನಿರ್ವಹಣೆ

0

ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾತ ಸಂಘ ಇದರ ಆಶ್ರಯದಲ್ಲಿ, ಆಲೆಟ್ಟಿ ಸಹಕಾರ ಸಂಘ, ಮಂಡೆಕೋಲು ಸಹಕಾರ ಸಂಘ, ಕನಕಮಜಲು ಸಹಕಾರ ಸಂಘದ ಸಹಯೋಗದಲ್ಲಿ ಆಧುನಿಕ ಕೃಷಿ ಮತ್ತು ರೋಗಗಳ ಸಮಗ್ರ ನಿರ್ವಹಣೆ ಮಾಹಿತಿ ಕಾರ್ಯಕ್ರಮವು ಆ.2 ರಂದು ಸುಳ್ಯ ಸಿ.ಎ. ಬ್ಯಾಂಕ್ ನ ಎ.ಎಸ್. ವಿಜಯಕುಮಾರ್ ಸಭಾಭವನದಲ್ಲಿ ನಡೆಯಿತು.

ಸುಳ್ಯ ಸಿ.ಎ. ಬ್ಯಾಂಕ್ ಅಧ್ಯಕ್ಷ ವಿಕ್ರಮ್ ಎ.ವಿ. ಯವರು ಅಧ್ಯಕ್ಷತೆ ವಹಿಸಿದ್ದರು.

ಆಲೆಟ್ಟಿ ಸಹಕಾರ ಸಂಘದ ಅಧ್ಯಕ್ಷ ಕರುಣಾಕರ ಹಾಸ್ಪಾರೆ, ಮಂಡೆಕೋಲು ಸಹಕಾರ ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಪೇರಾಲುಗುತ್ತು, ಕನಕಮಜಲು ಸಹಕಾರ ಸಂಘದ ಅಧ್ಯಕ್ಷ ನಾರಾಯಣ ಗೌಡ ಬೊಮ್ಮೆಟ್ಟಿ, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಶ್ರೀಮತಿ ಸುಹಾನ ಉದ್ಘಾಟನಾ ವೇದಿಕೆಯಲ್ಲಿ ಇದ್ದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ಇಂದೋರ್ ಸಸ್ಯಪೋಷಕ ಸಂಸ್ಥೆಯ ಮುಖ್ಯ ಕಾರ್ಯಪಾಲನಾ ನಿರ್ದೇಶಕ ಪೆರುವೋಡಿ ನಾರಾಯಣ ಭಟ್ ಎಲೆ ಚುಕ್ಕೆ ರೋಗದ ಪರಿಣಾಮ, ಹರಡುವಿಕೆ, ನಿಯಂತ್ರಣ ಕುರಿತು, ಅಡಿಕೆ ಕೃಷಿಗೆ ಕೀಟಭಾದೆ, ಸೊರಗು ರೋಗ, ಮಣ್ಣಿನ ಫಲವತ್ತತೆ ಸಹಿತ ವಿವಿಧ ವಿಚಾರಗಳ ಕುರಿತು ತಿಳಿಸಿದರಲ್ಲದೆ, ಔಷಧ ಸಿಂಪಡಣೆ ಇತ್ಯಾದಿಗಳ ಕುರಿತು ವಿವರವಾದ ಮಾಹಿತಿ ನೀಡಿದರು. ಕೃಷಿಕರ ಪ್ರಶ್ನೆಗಳಿಗೂ ಉತ್ತರಿಸಿದರು.