ಕೊಡಗು ಸಂಪಾಜೆ: ಪಿಕಪ್ – ಸ್ಕೂಟಿ ಅಪಘಾತ

0

ಪಿಕಪ್ ಮತ್ತು ಸ್ಕೂಟಿ ಮಧ್ಯೆ ಪರಸ್ಪರ ಅಪಘಾತ ಸಂಭವಿಸಿ, ಸ್ಕೂಟಿ ಹಿಂಬದಿ ಸವಾರನ ಕಾಲು ಮುರಿತಗೊಂಡ ಘಟನೆ ಕೊಡಗು ಸಂಪಾಜೆ ಗ್ರಾಮದ ಚೆಡಾವಿನಲ್ಲಿ ಸೆ.2ರಂದು ಮಧ್ಯಾಹ್ನ ಸಂಭವಿಸಿದೆ.

ಕೊಯನಾಡಿನ ಮಾದವ ಅವರು ತಮ್ಮ ಸ್ಕೂಟಿಯಲ್ಲಿ ಶ್ಯಾಮ್ ಅವರ ಜೊತೆ ಕೊಯನಾಡುಯಿಂದ ಸಂಪಾಜೆ ಕಡೆಗೆ ತೆರಳುತ್ತಿದ್ದ ವೇಳೆ ಸಂಪಾಜೆಯ ಚೆಡಾವಿನಲ್ಲಿ ಸುಳ್ಯ ಭಾಗದಿಂದ ಬರುತ್ತಿದ್ದ ಮೈಸೂರು ಮೂಲದ ಪಿಕಪ್ ವಾಹನಕ್ಕೆ ಢಿಕ್ಕಿ ಹೊಡೆದಿದ್ದು, ಸ್ಕೂಟಿ ಹಿಂಬದಿ ಸವಾರ ಕೊಡಗು ಸಂಪಾಜೆ ಗ್ರಾ.ಪಂ. ಮಾಜಿ ಸದಸ್ಯೆ ಶ್ರೀಮತಿ ರಾಜೇಶ್ವರಿ ಅವರ ಪತಿ ಶ್ಯಾಮ್ ಅವರ ಕಾಲು ಮುರಿತವಾಗಿರುವುದಾಗಿ ತಿಳಿದುಬಂದಿದೆ. ಸ್ಕೂಟಿ ಚಲಾಯಿಸುತ್ತಿದ್ದ ಮಾದವ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಗಾಯಾಳುಗಳನ್ನು ಸ್ಥಳೀಯರು ಸೇರಿ ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಅಂಬ್ಯುಲೆನ್ಸ್ ಮೂಲಕ ಸುಳ್ಯಕ್ಕೆ ಕರೆತರಲಾಗಿರುವುದಾಗಿ ತಿಳಿದುಬಂದಿದೆ.