ಕ್ರೀಡಾ ಸ್ಪೂರ್ತಿಯಿಂದ ಆಡಿ – ಡಾ. ಕೆ.ವಿ. ಚಿದಾನಂದ
ರಾಜೀವ್ ಗಾಂಧಿ ಆರೋಗ್ಯ ಮತ್ತು ವಿಜ್ಞಾನ ವಿಶ್ವವಿದ್ಯಾಲಯದ ಮಂಗಳೂರು ವಿಭಾಗ ಮಟ್ಟದ ಅಂತರ್ ಕಾಲೇಜು ಕ್ರೀಡಾಕೂಟ ಸುಳ್ಯದಲ್ಲಿ ಆಯೋಜಿದ್ದು, ಸುಮಾರು ವಿಭಾಗದ ವಿವಿಧ ಕಾಲೇಜುಗಳ 45 ತಂಡಗಳು ಭಾಗವಹಿಸುತ್ತಿದ್ದಾರೆ. ಕ್ರೀಡಾ ಸ್ಪೂರ್ತಿಯಿಂದ ಆಟ ಆಡಿ
ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಹೇಳಿದರು.
ಅವರು ಸೆ. 3 ಕೆ.ವಿ.ಜಿ. ಮೆಡಿಕಲ್ ಕಾಲೇಜು ಆಶ್ರಯದಲ್ಲಿ ನಡೆದ
ರಾಜೀವ್ ಗಾಂಧಿ ಆರೋಗ್ಯ ಮತ್ತು ವಿಜ್ಞಾನ ವಿಶ್ವವಿದ್ಯಾಲಯ,
ಮಂಗಳೂರು ವಿಭಾಗ ಮಟ್ಟದ ಅಂತರ್ ಕಾಲೇಜು ಫೂಟ್ಬಾಲ್ ಟೂರ್ನ್ ಮೆಂಟ್ 2024-25 ನ್ನು ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸುಳ್ಯ ತಹಶಿಲ್ದಾರ್ ಮಂಜುನಾಥ್ ಜಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾಲೇಜಿನ ಡೀನ್ ಡಾ. ನೀಲಾಂಬಿಕೈ ನಟರಾಜನ್,
ವಿಭಾಗೀಯ ಸಂಯೋಜಕರೂ,
ಉಜಿರೆ ಎಸ್.ಡಿ.ಎಂ. ಕಾಲೇಜಿನ ದೈಹಿಕ ನಿರ್ದೇಶಕರೂ ಆಗಿರುವ ಧರ್ಮೇಂದ್ರ ಕುಮಾರ್, ಕೆ.ವಿ.ಜಿ ಮೆಡಿಕಲ್ ದೈಹಿಕ ನಿರ್ದೇಶಕ ಮಿಥುನ್, ಕಾಲೇಜಿನ ವಿದ್ಯಾರ್ಥಿ ಸಂಘದ ನಾಯಕ ಡಾ. ಅರ್ಜುನ್, ಪ್ರಧಾನ ಕಾರ್ಯದರ್ಶಿ ಚಿದಾನಂದ ಗೌಡ ವೈ.ಹೆಚ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿಕ್ಷೇಪ್ ಚಂದ್ರಶೇಖರ್ ಮತ್ತು ಕುಸುಮಾಂಜಲಿ ಬಿ.ಎಲ್. ಕಾರ್ಯಕ್ರಮ ನಿರೂಪಿಸಿದರು. ಪ್ರತೀಕ್ಷಾ ಕಾಮತ್ ಪ್ರಾರ್ಥಿಸಿದರು. ಕಾಲೇಜಿನ ಕ್ರೀಡಾ ಸಂಯೋಜಕ ಡಾ. ವರುಣ್ ಭಾಸ್ಕರ್ ಸ್ವಾಗತಿಸಿ, ಅನನ್ಯ ವಂದಿಸಿದರು. ಸಭಾಕಾರ್ಯಕ್ರಮದ ಬಳಿಕ ಕ್ರೀಡಾಂಗಣದಲ್ಲಿ ಅತಿಥಿಗಳು ಫೂಟ್ಬಾಲ್ ಗೋಲ್ ಹೊಡೆಯುವ ಮೂಲಕ ಉದ್ಘಾಟಿಸಿದರು. ಕ್ರೀಡಾಕೂಟ 3 ದಿನಗಳ ಕಾಲ ನಡೆಯಲಿದ್ದು, ಸೆ. 5ರಂದು ಸಮಾರೋಪ ಸಮಾರಂಭ ನಡೆಯಲಿದೆ.