ಸುಳ್ಯದಲ್ಲಿ ಕಲಾಸ್ಪರ್ಶ ಸ್ಕೂಲ್ ಆಫ್ ಆರ್ಟ್ ಶುಭಾರಂಭ

0

ಸುಳ್ಯ ಜೂನಿಯರ್ ಕಾಲೇಜಿನ ಪಕ್ಕದಲ್ಲಿ ನೂತನವಾಗಿ ಕಲಾಸ್ಪರ್ಶ ಸ್ಕೂಲ್ ಆಫ್ ಆರ್ಟ್ ಶುಭಾರಂಭಗೊಂಡಿದ್ದು, ಸಂತ ಫಿಲೋಮಿನಾ ಪ್ರೌಢಶಾಲಾ ವಿಭಾಗದ ನಿವೃತ್ತ ಚಿತ್ರಕಲಾ ಶಿಕ್ಷಕ ಎಂ.ಎಸ್ ಪುರುಷೋತ್ತಮ ದೀಪ ಬೆಳಗಿಸಿ ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ಮಂಡೂರು ಶಾಲೆಯ ಮುಖ್ಯಗುರು ವಿಜಯ ವಹಿಸಿದ್ದರು.

ಅತಿಥಿಗಳಾಗಿ ಮುಂಡೂರು ಶಾಲೆಯ ಶಿಕ್ಷಕ ರಾಮಚಂದ್ರ ಬಿ., ಓಂ ಸಾಯಿ ನಿಲಯದ ಮಾಲಕಿ ಭವಾನಿ ಉಪಸ್ಥಿತರಿದ್ದರು.

ಕಲಾಸ್ಪರ್ಶ ಸ್ಕೂಲ್ ಆಫ್ ಆರ್ಟ್ ಸಂಚಾಲಕ ಶಿವಸುಬ್ರಹ್ಮಣ್ಯ ಸ್ವಾಗತಿಸಿದರು. ಗೌತಮಿ ವಂದಿಸಿದರು. ಯತೀಶ್ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ಕಲಾಸ್ಪರ್ಶ ಸ್ಕೂಲ್ ಆಫ್ ನ ಸದಸ್ಯರುಗಳು, ಕುಟುಂಬಸ್ಥರು, ಸ್ಥಳೀಯರು ಪೋಷಕರು ಹಾಗೂ ಮಂಡೂರು ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಕಲಾಸ್ಪರ್ಶ ಸ್ಕೂಲ್ ಆಫ್ ಆರ್ಟ್ ಇದರ ದಾಖಲಾತಿಯು ಪ್ರಾರಂಭಗೊಂಡಿದ್ದು ವಿದ್ಯಾರ್ಥಿಗಳಿಂದ ಹಿಡಿದು ವಯಸ್ಕರ ವರೆಗೆ ವಯೋಮಾನಕ್ಕೆ ಅನುಗುಣವಾಗಿ ಚಿತ್ರಕಲೆ ಹಾಗೂ ಅಲಂಕಾರ ವಿಭಾಗಗಳಲ್ಲಿ ಉತ್ತಮವಾದ ತರಬೇತಿಯನ್ನು ನೀಡಲಾಗುವುದು ಹಾಗೂ ಗ್ರೇಟ್ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತರಬೇತುಗೊಳಿಸಲಾಗುವುದು ಎಂದು ಸಂಸ್ಥೆಯ ಸಂಚಾಲಕ ಶಿವ ಸುಬ್ರಮಣ್ಯ ತಿಳಿಸಿದ್ದಾರೆ.