ಪೆರಾಜೆ ಕಲ್ಚೆರ್ಪೆ ಸಮೀಪದ ಅರಣ್ಯದಲ್ಲಿ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.
ಪೂಮಲೆ ರಕ್ಷಿತಾರಣ್ಯದಿಂದ ನೀರು ಹರಿದು ಬರುತ್ತಿದ್ದು ಈ ಪರಿಸರದಲ್ಲಿ ವಾಸಿಸುವ ಜನರು ಕುಡಿಯಲು ಗುಡ್ಡೆಯಿಂದ ಬರುವ ನೀರನ್ನು ಉಪಯೋಗಿಸುತ್ತಿದ್ದಾರೆ. ಇದ್ದಕ್ಕಿದ್ದಂತೆ ನೀರು ಬರುವುದು ನಿಂತ ಕಾರಣದಿಂದ ಹೋಗಿ ನೋಡಿದಾಗ ಅಲ್ಲಿ ಕಟ್ಟ ಮತ್ತು ಪೈಪುಗಳನ್ನು ಒಡೆದು ಹಾಕಿದ್ದು ಅಲ್ಲಿ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿದೆ. ಚಿರತೆ ಅಲ್ಲಿಂದ ಪೆರಾಜೆ ಕಡೆಗೆ ಬಂದಿರಬಹುದೆಂದು ಸಂಶಯಿಲಾಗಿದ್ದು ಇದರಿಂದಾಗಿ
ಈ ಭಾಗದ ಜನರು ಆತಂಕಕ್ಕೀಡಾಗಿದ್ದಾರೆ.