ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ : ಕಲ್ಮಕಾರು ಶಾಲೆಗೆ ಸಮಗ್ರ ಪ್ರಶಸ್ತಿ

0

ಸ ಹಿ ಪ್ರಾ ಶಾಲೆ ಬಾಳಗೋಡಿನಲ್ಲಿ ಹರಿಹರ ಪಲ್ಲತಡ್ಕ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯು ಸೆ.2 ರಂದು ನಡೆದಿದ್ದು ಉ ಹಿ ಪ್ರಾ ಶಾಲೆ ಕಲ್ಮಕಾರು ಇದು ಸಮಗ್ರ ಪ್ರಶಸ್ತಿಯನ್ನು ಪಡೆದು ಕೊಂಡಿತು.

ಕಿರಿಯ ವಿಭಾಗದಲ್ಲಿ ಸಮಗ್ರ ಪ್ರಥಮ ಸ್ಥಾನ, ಹಿರಿಯ ವಿಭಾಗದಲ್ಲಿ ಸಮಗ್ರ ದ್ವಿತೀಯ ಸ್ಥಾನ ಸೇರಿ ಶಾಲೆಯು ಸಮಗ್ರ ಪ್ರಶಸ್ತಿ ಪಡೆಯಿತು. ಶಾಲಾ ಮುಖ್ಯೋಪಾಧ್ಯಾಯಿನಿ, ಸಹ ಶಿಕ್ಷಕರು, ಎಸ್.ಡಿ.ಎಂ.ಸಿ, ಪೋಷಕರು ಪ್ರಶಸ್ತಿ ಪಡೆಯುವಂತಾಗಲು ಸಹಕರಿಸಿದರು.